Sunday, July 26, 2026

ಇಲಾಖೆಯ ಅತ್ಯುತ್ತಮ ಸಾಧನೆಗೆ ಬಿ. ವಿಜಯ ಕುಮಾರ್‌ಗೆ ಡಿಜಿ ಪ್ರಶಂಸನೀಯ ಪದಕ

Must read

ಉಡುಪಿ: ಮೆಸ್ಕಾಂ ಜಾಗೃತ ದಳದ ಹೆಡ್ ಕಾನ್ಸ್ಟೇಬಲ್ ಬಿ. ವಿಜಯ ಕುಮಾರ್ ಅವರಿಗೆ ಇಲಾಖೆಯಲ್ಲಿ ಸಲ್ಲಿಸಿದ ಅತ್ಯುತ್ತಮ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಪೊಲೀಸ್ ಮಹಾನಿರ್ದೇಶಕ ಹಾಗೂ ಮಹಾ ಪರಿಶೀಲಕ (ಡಿಜಿ ಮತ್ತು ಐಜಿಪಿ) ಡಾ. ಎಂ.ಎ. ಸಲೀಂ ಅವರು ಡಿಜಿ ಪ್ರಶಂಸನೀಯ ಪದಕ ಪ್ರದಾನ ಮಾಡಿ ಗೌರವಿಸಿದರು.
ಬೆಂಗಳೂರು ಕೋರಮಂಗಲದ ಕೆಎಸ್‌ಆರ್‌ಪಿ (KSRP) ಮೈದಾನದಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಡಾ. ಎಂ.ಎ. ಸಲೀಂ ಅವರು ಪದಕ ಪ್ರದಾನಿಸಿ ಅಭಿನಂದಿಸಿದರು.
ಇಲಾಖೆಯ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸಿ ಗಮನಾರ್ಹ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ಈ ಗೌರವ ಲಭಿಸಿದ್ದು, ಬಿ. ವಿಜಯ ಕುಮಾರ್ ಅವರ ಸಾಧನೆಗೆ ಸಹೋದ್ಯೋಗಿಗಳು, ಅಧಿಕಾರಿಗಳು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here