Friday, May 15, 2026

ಕೊಡವೂರು ಮಹಾರುದ್ರಯಾಗ: ಧಾರ್ಮಿಕ‌ ಕಾರ್ಯಕ್ರಮಕ್ಕೆ ಚಾಲನೆ

Must read

ಉಡುಪಿ: ಕೊಡವೂರು ಮಹತೋಭಾರ ಶ್ರೀಶಂಕರನಾರಾಯಣ ದೇವಸ್ಥಾನದಲ್ಲಿ ಲೋಕ ಕಲ್ಯಾಣಾರ್ಥ ಆಯೋಜಿಸಿರುವ ಮಹಾರುದ್ರಯಾಗ ಅಂಗವಾಗಿ ಇಂದು ಬೆಳಿಗ್ಗೆಯಿಂದ ರುದ್ರಜಪ, ಉಗ್ರಾಣ ಮುಹೂರ್ತ ಸಹಿತ ವಿವಿಧ ಧಾರ್ಮಿಕ‌ ಕಾರ್ಯಕ್ರಮಗಳು‌ ನೆರವೇರಿದವು.

ವೇದ ಮೂರ್ತಿ ಹಯವದನ ತಂತ್ರಿಗಳು ಪುತ್ತೂರು, ಮಧುಸೂದನ ತಂತ್ರಿಗಳು, ಸುಬ್ರಹ್ಮಣ್ಯ ಭಟ್, ವಾದಿರಾಜ ತಂತ್ರಿಗಳ ನೇತೃತ್ವದಲ್ಲಿ ಬೆಳಿಗ್ಗೆ 8.30ಕ್ಕೆ ಋತ್ವಿಜರ ಸ್ವಾಗತ, ಪ್ರಾರ್ಥನೆ, ತೋರಣ ಮುಹೂರ್ತ ನೆರವೇರಿಸಲಾಯಿತು.

ನಂತರ ಉಗ್ರಾಣ ಮುಹೂರ್ತ, ಅರಣಿ ಮಥನ, ಅಗ್ನಿ ಜನನ, ಬ್ರಹ್ಮಕೂರ್ಚ ಹೋಮ ನೆರವೇರಿತು. ಕಂಕಣ ಬಂಧ, ದ್ವಾದಶ ನಾರಿಕೇಳ ಗಣಯಾಗ ನೆರವೇರಿತು. ಪುರೋಹಿತರಿಂದ ಮಹಾರುದ್ರ ಪಠಣ ಆರಂಭಗೊಂಡಿತು.
ಮಹಾ ರುದ್ರಯಾಗ ಸಮಿತಿಯ ಕಾರ್ಯಾಧ್ಯಕ್ಷ ಪ್ರಸಾದ್ ರಾಜ್ ಕಾಂಚನ್, ಕೊಡವೂರು ಶಂಕರನಾರಾಯಣ ದೇವಸ್ಥಾನದ ಅಧ್ಯಕ್ಷರಾದ ಪ್ರಕಾಶ್ ಜಿ ಕೊಡವೂರು, ಮಹಾರುದ್ರ ಯಾಗ ಸಮಿತಿಯ ಪ್ರಧಾನ ಸಂಚಾಲಕರಾದ ತಾರನಾಥ ಪೂಜಾರಿ, ಸಂಚಾಲಕರಾದ ನಂದಕಿಶೋರ್ ಕೆಮ್ಮಣ್ಣು ರಮೇಶ್ ತಿಂಗಳಾಯ ಮೊದಲಾದ ಗಣ್ಯರು ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here