Tuesday, April 14, 2026

ಉಡುಪಿ: ಎ. 14ರಂದು ಶ್ರೀರಾಮ ಟಂಕ ಜಪ ಅಭಿಯಾನ- ಪುತ್ತಿಗೆ ಶ್ರೀ ಚಾಲನೆ

Must read

ಉಡುಪಿ: ಶ್ರೀರಾಮ ಟಂಕ ಜಪ ಅಭಿಯಾನ ಎ.14ರಂದು ಶ್ರೀಕೃಷ್ಣಮಠ ಸಮೀಪದ ಗೀತಾಮಂದಿರದಲ್ಲಿ ನಡೆಯಲಿದೆ ಎಂದು ಅಭಿಯಾನ ಪ್ರವರ್ತಕ ಮಂಜುನಾಥ ಕುಡ್ವ ಮಂಗಳೂರು ತಿಳಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಬೆಳಿಗ್ಗೆ 7ಕ್ಕೆ ಪುತ್ತಿಗೆ ಮಠದ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.
ಶ್ರೀರಾಮ ಟಂಕ ಪುರಾಣ ಕಾಲದ ನಾಣ್ಯವಾಗಿದ್ದು, ಧಾರ್ಮಿಕ ಸ್ಪರ್ಶವಿದೆ. ಇದನ್ನು ಸ್ಪರ್ಶಿಸಿ ‘ಶ್ರೀರಾಮ ಜಯ ರಾಮ ಜಯ ಜಯ ರಾಮ’ ಎಂದು ಜಪಿಸಿದರೆ ದೇಹದಲ್ಲಿರುವ ನಕಾರಾತ್ಮಕ ಗುಣ ಕಳೆದು, ಧನಾತ್ಮಕ ಶಕ್ತಿ ಉಂಟಾಗುತ್ತದೆ. ಏ.14ರ ನಂತರ ಪ್ರತಿ ಭಾನುವಾರ ಬೆಳಗ್ಗೆ 10 ಗಂಟೆಗೆ ಶ್ರೀರಾಮ ಟಂಕ ಜಪ ಅಭಿಯಾನ ಇರಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಗೀತಾ ಮಂದಿರದ ಪ್ರಭಾರಿ ಕೆ.ವಿ. ರಮಣಾಚಾರ್ಯ ಉಪಸ್ಥಿತರಿದ್ದರು

spot_img

More articles

LEAVE A REPLY

Please enter your comment!
Please enter your name here