Thursday, April 9, 2026

ಉಡುಪಿ: ಇಂದು ಇಂದ್ರಾಣಿ ಶ್ರೀ ಮುಖ್ಯಪ್ರಾಣ ದೇವರ ಪ್ರತಿಷ್ಠೆ- ಧಾರ್ಮಿಕ ಸಭೆ

Must read

ಉಡುಪಿ: ಇಂದ್ರಾಳಿಯ ಇಂದ್ರಾಣಿ ಶ್ರೀಮುಖ್ಯಪ್ರಾಣ ದೇವರ ಹಾಗೂ ನಾಗದೇವರ ಪುನರ್ ಪ್ರತಿಷ್ಠೆ ಬ್ರಹ್ಮಕಲಶೋತ್ಸವದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ವೈಭವದಿಂದ ನಡೆಯುತ್ತಿವೆ.
ಇಂದು ಬೆಳಗ್ಗೆ ಆದ್ಯ ಗಣಯಾಗ, ಪ್ರತಿಷ್ಠಾ ಹೋಮ, ಸ್ನಪನ ಕಲಶಾಭಿಷೇಕ, ಪ್ರಾಯಶ್ಚಿತ ಹೋಮ, ಶ್ರೀವಾಯುಸ್ತುತಿ ಹೋಮ, ನವಗ್ರಹ ಹೋಮ, ಪವಮಾನ ಹೋಮ ನೆರವೇರಲಿದೆ. ತತ್ವಹೋಮ, ಮಧ್ಯಾಹ್ನ 12.15ಕ್ಕೆ ಮಹಾಪೂಜೆ, ಅನ್ನ ಸಂತರ್ಪಣೆ, ಸಂಜೆ 6ರಿಂದ ಮಹಾಸುದರ್ಶನ ಹೋಮ, ದಿಶಾಹೋಮ, ಕಲಶ ಮಂಡಲ ರಚನೆ, ಅಧಿವಾಸ ಪೂಜೆ ಜರುಗಲಿದೆ.

ಬೆಳಿಗ್ಗೆ 11 ಗಂಟೆಗೆ ಮಣಿಪಾಲ ನೃತ್ಯ ಕಲಾ ಮಂದಿರದ ವಿದುಷಿ ಸವಿತಾ ಮುರಳೀಧರ ಅವರ ಶಿಷ್ಯ ವೃಂದದಿಂದ ನೃತ್ಯ ವೈಭವವಿದೆ.
ಸಂಜೆ 4ರಿಂದ 5.30ರ ತನಕ ಮಣಿಪಾಲ ಹುಡೋ ಕಾಲೊನಿಯ ಶ್ರೀಪ್ರಸನ್ನ ಗಣಪತಿ ಭಜನಾ ಮಂಡಳಿಯ ಉಷಾ ಹೆಬ್ಬಾರ್ ಮತ್ತು ತಂಡದಿಂದ ಭಜನಾಮೃತಂ, ಮಧ್ಯಾಹ್ನ 2ರಿಂದ ಗುಂಡಿಬೈಲು ಯಕ್ಷಗಾನ ಕಲಾ ಕ್ಷೇತ್ರದಿಂದ ಯಕ್ಷಗಾನ ತಾಳ ಮದ್ದಳೆ ನಡೆಯಲಿದೆ.
ಧಾರ್ಮಿಕ ಸಭೆ: ಸಂಜೆ 5.30ಕ್ಕೆ ನಡೆಯುವ ಧಾರ್ಮಿಕ ಸಭೆಯಲ್ಲಿ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು, ಅದಮಾರು ಮಠದ ಕಿರಿಯ ಯತಿ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಸೋದೆ ಮಠದ ಶ್ರೀವಿಶ್ವವಲ್ಲಭತೀರ್ಥ ಶ್ರೀಪಾದರು ಆಶೀರ್ವಚನ ನೀಡುವರು.
ಬಾರ್ಕೂರಿನ ವಿದ್ವಾಂಸ ದಾಮೋದರ ಶರ್ಮಾ ಅವರಿಂದ ಧಾರ್ಮಿಕ ಪ್ರವಚನ ವಿದೆ. ಇಂದ್ರಾಣಿ ಶ್ರೀಮುಖ್ಯಪ್ರಾಣ, ಶ್ರೀ ನಾಗದೇವರ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಅಧ್ಯಕ್ಷತೆ ವಹಿಸುವರು.

ಶಾಸಕ ಯಶಪಾಲ್ ಸುವರ್ಣ, ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ವಿ. ಸುನಿಲ್ ಕುಮಾರ್, ಕಾಪು ಶ್ರೀಹೊಸಮಾರಿ ಗುಡಿ ದೇವಸ್ಥಾನ ಅಭಿವೃದ್ಧಿಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಅಂಬಲಪಾಡಿ ಶ್ರೀ ಜನಾರ್ದನ ಮತ್ತು ಮಹಾಕಾಳಿ ದೇವಸ್ಥಾನದ ಆಡಳಿತ ಮೊಕ್ತೇಸರ ಡಾ.ನಿ.ಬೀ. ವಿಜಯ ಬಲ್ಲಾಳ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಮಣಿಪಾಲದ ಡಾ.ಟಿ.ಎಂ.ಎ. ಪೈ ಫೌಂಡೇಶನ್ ಅಧ್ಯಕ್ಷ ಟಿ.ಅಶೋಕ್ ಪೈ, ಮುಂಬಯಿಯ ಜಾಜ್ ಇಂಟರ್‌ನ್ಯಾಷ ನಲ್ ಇಂಡಿಯಾ ಕಾರ್ಯ ನಿರ್ವಾಹಕ ನಿರ್ದೇಶಕ ಜಯಕರ ಶೆಟ್ಟಿ ಬುಡ್ನಾರು, ಉಜ್ವಲ್ ಸಮೂಹ ಸಂಸ್ಥೆಗಳ ಪುರುಷೋತ್ತಮ ಪಿ.ಶೆಟ್ಟಿ, ಸಾಯಿರಾಧಾ ಸಮೂಹ ಸಂಸ್ಥೆಗಳ ಮನೋಹರ್ ಎಸ್.ಶೆಟ್ಟಿ, ಸ್ವದೇಶ್ ಸಮೂಹ ಸಂಸ್ಥೆಗಳ ಶ್ರೀನಾಗೇಶ್ ಹೆಗ್ಡೆ, ಉಡುಪಿ ತಹಸೀಲ್ದಾರ್ ಗುರುರಾಜ್ ಪಿ.ಆರ್., ಬೆಂಗಳೂರಿನ ಉದ್ಯಮಿ ಇಂದ್ರಾಳಿ ಕುಶಲ್ ಶೆಟ್ಟಿ ಪಾಲ್ಗೊಳ್ಳುವರು. ರಾತ್ರಿ 7.30ರಿಂದ ಉಡುಪಿಯ ಕಲಾ ಮಯಂವತಿಯಿಂದ ಜನಪದ ಕಲರವ ಜನಪದ ಹಾಗೂ ರಂಗ ಸಂಗೀತ, ಜಾನಪದ ವಾದ್ಯಪರಿಕರಗಳ ಸಮ್ಮಿಲನ ನಡೆಯಲಿದೆ.


ಇಂದ್ರಾಣಿ ಕ್ಷೇತ್ರಕ್ಕೆ ರಿಕ್ಷಾ ಉಚಿತ ಸೇವೆ:
ಇಂದ್ರಾಣಿ ಶ್ರೀಮುಖ್ಯ ಪ್ರಾಣ ಹಾಗೂ ಶ್ರೀನಾಗದೇವರ ಪುನಃಪ್ರತಿಷ್ಠೆ, ಬ್ರಹ್ಮಕಲಶೋತ್ಸವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಬರುವ ಭಕ್ತರು, ಸಾರ್ವಜನಿಕರಿಗೆ ಉಚಿತ ರಿಕ್ಷಾ ಪ್ರಯಾಣ ಸೇವೆಯನ್ನು ಸಚ್ಚೇಂದ್ರ ಇಂದ್ರಾಳಿ, ಪ್ರಶಾಂತ್ ಶೆಟ್ಟಿ, ರವಿ ಕುಮಾರ್, ವೇಣು ಗುಳ್ಳೆ ಶುಕ್ರವಾರ ಒದಗಿಸಿದರು.

.

spot_img

More articles

LEAVE A REPLY

Please enter your comment!
Please enter your name here