Friday, February 20, 2026

ಪರ್ಕಳ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ದೇವಸ್ಥಾನ: ಪರಿಸರ ಸ್ನೇಹಿ “ಮಯೂರ’ ದ್ವಾರಕ್ಕೆ ಚಾಲನೆ

Must read

ಉಡುಪಿ: ಜಿಲ್ಲೆಯ ಪ್ರಸಿದ್ಧ ಶಿವತಾಣಗಳಲ್ಲೊಂದಾದ ಉಡುಪಿ ತಾಲೂಕಿನ ಪರ್ಕಳದಲ್ಲಿರುವ ಶ್ರಿ ಮಹಾಲಿಂಗೇಶ್ವರ ಮಹಾಗಣಪತಿ ಮಹಿಷಮರ್ಧಿನಿ ಅಯ್ಯಪ್ಪ ದೇವಸ್ಥಾನದಲ್ಲಿ ಶ್ರದ್ಧಾ ಭಕ್ತಿಯಿಂದ ಮಹಾಶಿವರಾತ್ರಿ ಆಚರಿಸಲಾಯಿತು.
ಬೆಳಗ್ಗೆ ಸಾಮೂಹಿಕ ಶತರುದ್ರಾಭಿಷೇಕ, ಸಂಜೆ 6 ಗಂಟೆಯಿಂದ ಮರುದಿನ ಬೆಳಗ್ಗೆ 6 ಗಂಟೆಯವರೆಗೆ ಕುಣಿತ ಭಜನೆ ಹಾಗೂ ಮಂಗಲೋತ್ಸವ ನಡೆಯಿತು. ರಾತ್ರಿ 9:30ಕ್ಕೆ ರುದ್ರ ದೇವರಿಗೆ ರಂಗಪೂಜೆ ನೆರವೇರಿತು.
ಮಹಾಶಿವರಾತ್ರಿ ಹಿನ್ನೆಲೆಯಲ್ಲಿ ಮಹಾಲಿಂಗೇಶ್ವರ ಮಹಾಗಣಪತಿ ಭಜನಾ ಮಂಡಳಿ ಹಾಗೂ ವಾಲಿಬಾಲ್​ ಫ್ರೆಂಡ್ಸ್ ​ ಪರ್ಕಳದ ಸದಸ್ಯರು ದೇವಾಲಯದ ಮುಂಭಾಗದಲ್ಲಿ ಸುಂದರವಾದ ಪರಿಸರ ಸ್ನೇಹಿ “ಮಯೂರ ದ್ವಾರ’ ನಿರ್ಮಿಸಿದ್ದರು. ತೆಂಗಿನಗರಿ, ತಾಳೆಗರಿ, ಬಾಳೆ ಹಾಗೂ ವಿವಿಧ ಫಲ & ತರಕಾರಿ ಬಳಸಿದ್ದ ಈ ದ್ವಾರ ಶಿವನ ದರ್ಶನಕ್ಕೆ ಬಂದ ಭಕ್ತರ ಗಮನ ಸೆಳೆಯಿತು.

spot_img

More articles

LEAVE A REPLY

Please enter your comment!
Please enter your name here