ಉಡುಪಿ: ವಿಜಯಪುರ ಮಹಿಳಾ ವಿವಿಯ ಸಹಾಯಕ ಪ್ರಾಧ್ಯಾಪಕ, ಉಡುಪಿ ಮಣಿಪಾಲದ ನಿವಾಸಿ ಸಂದೀಪ್ ಅವರು ಮಂಡಿಸಿರುವ “ಕವರೇಜ್ ಆಫ್ ಸೈಬರ್ ಕ್ರೈಮ್: ಅ ಕಂಪಾರೇಟಿವ್ ಅನಾಲಿಸಿಸ್ ಎಮಂಗ್ ಕನ್ನಡ ಆಂಡ್ ಇಂಗ್ಲೀಷ್ ಡೈಲೀಸ್” ವಿಷಯದ ಕುರಿತ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾನಿಲಯವು ಪಿಎಚ್‌ಡಿ ಪದವಿ ನೀಡಿದೆ.
ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರೊ. ಜೆ. ಎಂ. ಚಂದುನವರ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ಕೈಗೊಂಡಿದ್ದರು. ವಿವಿಯ ಕುಲಪತಿ ಪ್ರೊ. ಎ. ಎಂ ಖಾನ್, ಕುಲಸಚಿವ ಡಾ.ಶಂಕರೆಪ್ಪ ವಣಿಕ್ಯಾಳ, ಮೌಲ್ಯಮಾಪನ ಕುಲಸಚಿವ ಪ್ರೊ. ನಿಜಲಿಂಗಪ್ಪ ವೈ. ಮಟ್ಟಿಹಾಳ, ವಿಭಾಗದ ಮುಖ್ಯಸ್ಥ ಪ್ರೊ. ಸಂಜಯಕುಮಾರ ಮಾಲಗತ್ತಿ ಅಭಿನಂದಿಸಿದ್ದಾರೆ. ಬೆಂಗಳೂರು ವಿಶ್ವವಿದ್ಯಾನಿಲಯದ ಸಂವಹನ ವಿಭಾಗದ ಮುಖ್ಯಸ್ಥೆ ಪ್ರೊ. ಶೈಲಶ್ರೀ ಬಿ. ಬಾಹ್ಯ ಮೌಲ್ಯಮಾಪಕರಾಗಿ ಆಗಮಿಸಿದ್ದರು.
ಪ್ರಸ್ತುತ ಸಂದೀಪ್ ಅವರು ವಿಜಯಪುರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯ ಪತ್ರಿಕೋದ್ಯಮ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮಣಿಪಾಲ ವಿಜಯನಗರದ ವಿಠಲ್ ನಾಯ್ಕ್ ಅವರ ಪುತ್ರ.
ವಿಜಯಪುರ ಮಹಿಳಾ ವಿವಿಯ ಸಹಾಯಕ ಪ್ರಾಧ್ಯಾಪಕ ಸಂದೀಪ್‌ಗೆ ಪಿಎಚ್ ಡಿ ಪದವಿ
More articles

