ಉಡುಪಿ: ಮಂಚಿಕೆರೆ ಶ್ರೀ ವಾಸುಕಿ ನಾಗಯಕ್ಷಿ ಸನ್ನಿಧಾನದ 21ನೇ ಪ್ರತಿಷ್ಠಾ ವರ್ಧಂತಿ ಮಹೋತ್ಸವ ಶುಕ್ರವಾರ ಸಂಪನ್ನಗೊಂಡಿತು.
ವೇದಮೂರ್ತಿ ಅಲೆವೂರು ಮೋಹನ ತಂತ್ರಿಗಳ ನೇತೃತ್ವದಲ್ಲಿ ಆಶ್ಲೇಷಬಲಿ, ನವಕ ಪ್ರದಾನ ಹೋಮ, ಕಳಶಾಭಿಷೇಕ ಪ್ರಸನ್ನ ಪೂಜೆ ನೆರವೇರಿತು. ಸಾವಿರಾರು ಮಂದಿ ಸನ್ನಿಧಾನಕ್ಕೆ ಆಗಮಿಸಿ ದೇವರ ದರ್ಶನ ಪಡೆದರು. ಬಳಿಕ ಭೋಜನ ಪ್ರಸಾದ ಸ್ವೀಕರಿಸಿದರು.
ಮೂರು ದಿನಗಳ ಕಾಲ ನಡೆದ ಮಹೋತ್ಸವದಲ್ಲಿ ಸ್ಥಳೀಯರು, ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕಾತಿಕ ಕಾರ್ಯಕ್ರಮ ನಡೆಯಿತು. ಭಜನಾ ಕಾರ್ಯಕ್ರಮ, ಭಕ್ತಿ ಸಂಗೀತ ರಸಮಂಜರಿ, ಕುಣಿತ ಭಜನೆ ಹಾಗೂ ಯಕ್ಷಗಾನ ಪ್ರದರ್ಶನಗೊಂಡಿತು.


