Home ಕರಾವಳಿ ನಿರಂತರ ರಕ್ತದಾನದಿಂದ ಸದೃಢ ದೈಹಿಕ‌ ಆರೋಗ್ಯ ಪಡೆಯಲು ಸಾಧ್ಯ; ಪ್ರಮೋದ್ ಮಧ್ವರಾಜ್

ನಿರಂತರ ರಕ್ತದಾನದಿಂದ ಸದೃಢ ದೈಹಿಕ‌ ಆರೋಗ್ಯ ಪಡೆಯಲು ಸಾಧ್ಯ; ಪ್ರಮೋದ್ ಮಧ್ವರಾಜ್

ಉಡುಪಿ: ನಿರಂತರ ರಕ್ತದಾನ ಮಾಡುವುದರಿಂದ ದೈಹಿಕ‌ ಆರೋಗ್ಯ ಸದೃಢವಾಗುತ್ತದೆ. ಇಂದಿನ ದಿನಗಳಲ್ಲಿ ರಕ್ತದ ಅವಶ್ಯಕತೆ ಬಹಳಷ್ಟಿದ್ದು, ಅದನ್ನು ಪೂರೈಸಲು ರಕ್ತದಾನ ಶಿಬಿರಗಳನ್ನು ಆಯೋಜಿಸುವುದು ಅನಿವಾರ್ಯವಾಗಿದೆ. ರಕ್ತದಾನ ಮಾಡುವ ಮೂಲಕ ಇನ್ನೊಬ್ಬರ ಜೀವ ಉಳಿಸುವ ಕಾರ್ಯವನ್ನು ಎಲ್ಲರು ಮಾಡಬೇಕು ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಹೇಳಿದರು.
ನೆಸ್ ಫಿಟ್ ಜಿಮ್ ಮಣಿಪಾಲ, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಉಡುಪಿ ಹಾಗೂ ರಕ್ತ ಕೇಂದ್ರ ಕೆಎಂಸಿ ‌ಮಣಿಪಾಲ ಇವರ ಸಂಯುಕ್ತ ಆಶ್ರಯದಲ್ಲಿ ಮಣಿಪಾಲ ಕೆಎಂಸಿ ಆಸ್ಪತ್ರೆಯ ರಕ್ತನಿಧಿ ಕೇಂದ್ರದಲ್ಲಿ ಭಾನುವಾರ ಆಯೋಜಿಸಿದ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತಾಡಿದರು.
ರಕ್ತ ನಿಧಿ ಕೇಂದ್ರದ ಮುಖ್ಯಸ್ಥರಾದ ಡಾ. ಗಣೇಶ್ ಮೋಹನ್ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ನಗರಸಭಾ ಸದಸ್ಯರಾದ ಮಂಜುನಾಥ್ ಮಣಿಪಾಲ, ಮಣಿಪಾಲ ಎಂಐಟಿ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಡಾ. ಬಾಲಕೃಷ್ಣ ಮದ್ದೋಡಿ, ಕೆಎಂಸಿ ಆಸ್ಪತ್ರೆಯ ಸುರಕ್ಷಾ ಅಧಿಕಾರಿ ಕ್ಲಿಂಗ್ ಜಾನ್ಸನ್, ಅಭಯಹಸ್ತ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಸತೀಶ್ ಸಾಲ್ಯಾನ್ ಮಣಿಪಾಲ್, ಮಣಿಪಾಲ ವೆಲ್ ನೆಸ್ ಜಿಮ್ ಮಾಲೀಕ ತಿಲಕ್ ಶೆಟ್ಟಿ, ರಕ್ತ ಕೇಂದ್ರದ ಸವಿನ, ಅಮಿತ ಶೆಟ್ಟಿ ಉಪಸ್ಥಿತರಿದ್ದರು.
ಸಾಜನ್ ಸತೀಶ್ ಸಾಲ್ಯಾನ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಮಂಜುನಾಥ್ ವಂದಿಸಿದರು.

Exit mobile version