ಉಡುಪಿ: ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ನ 2025-27ನೇ ಸಾಲಿನ ನೂತನ ಅಧ್ಯಕ್ಷರಾಗಿ ಹರೀಶ್ ಜಿ. ಕಲ್ಮಾಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಮಣಿಪಾಲ ವೈಷ್ಣವಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ನ ಮಹಾಸಭೆಯಲ್ಲಿ ಅವರನ್ನು ಆಯ್ಕೆ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಡಾ. ರಘು ಚಂದ್ರಶೇಖರ್, ಕಾರ್ಯದರ್ಶಿಯಾಗಿ ಡಾ.ಬಾಲಚಂದ್ರ ಎಂ. ಹಾಗೂ ಕೋಶಾಧಿಕಾರಿಯಾಗಿ ಗಣಪತಿ ಕಾಮತ್ ಅವರನ್ನು ನೇಮಿಸಲಾಯಿತು.
ಕಾರ್ಯಕಾರಿ ಮಂಡಳಿಯ ಸದಸ್ಯ ವಿವರ: ಜೊತೆ ಕಾರ್ಯದರ್ಶಿಯಾಗಿ ರವೀಂದ್ರ ಮಾರಡಿ, ಕಾರ್ಯಕಾರಿ ಸಮಿತಿಯ ಸದಸ್ಯರುಗಳಾಗಿ ರಾಜವರ್ಮ ಅರಿಗ, ಡಾ.ಸುರೇಶರಮಣಮಯ್ಯ, ಡಾ.ಅರುಣ್ ಜಿ ಮಯ್ಯ, ಶಾಹಿಕ ನೂರುಲ್ಲ, ರಾಜಕುಮಾರ್ ಮಸ್ಕರೇನಸ್, ಡಾ.ವಿನಾಯಕ ಶೆಣೈ, ಶೋಭಾ ಎಚ್ಎಸ್, ಡಾ.ಶಿವಪ್ರಸಾದ್ ಎಚ್ ಸಿ, ಡಾ.ಶ್ರೀಪತಿ ಅಡಿಗ, ಡಾ.ಶಾಮಸುಂದರ್ ಭಟ್, ಡಾ.ಶೋಭಾ ಯು ಕಾಮತ್, ದೇವಿ ಪ್ರಸಾದ್ ಶೆಟ್ಟಿ. ಸಲಹೆಗಾರರಾಗಿ– ಕೆ.ದಿನಕರ್ ಶೆಟ್ಟಿ, ಡಾ.ಎಚ್ ಜೆ ಗೌರಿ, ಪ್ರೊ.ವಿಶ್ವನಾಥ್ ರಾವ್ ಎಚ್ ಕೆ, ಡಾ.ಎನ್ ಯಜ್ಞೇಶ್ ಶರ್ಮ, ಶ್ರೀನಿವಾಸ್ ಪೂಜಾರಿ, ವಿಶೇಷ ಆಹ್ವಾನಿತರಾಗಿ ನಗರಸಭೆ ಸದಸ್ಯರಾದ ಮಂಜುನಾಥ್ ಮಣಿಪಾಲ ಅವರನ್ನು ಆಯ್ಕೆ ಮಾಡಲಾಯಿತು.
ಈಶ್ವರ ನಗರ ರೆಸಿಡೆನ್ಸ್ ವೆಲ್ಫೇರ್ ಅಸೋಸಿಯೇಷನ್ ನ ಅಧ್ಯಕ್ಷರಾಗಿ ಹರೀಶ್ ಜಿ. ಕಲ್ಮಾಡಿ ಅವಿರೋಧವಾಗಿ ಆಯ್ಕೆ

