ಮಣಿಪಾಲ: ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದ ಹೆರ್ಗಾ ಗ್ರಾಮದ ಮನೆಯೊಂದಕ್ಕೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಮಂಡ್ಯದ ಶಿವರಾಜ(38) ಮತ್ತು ಬಾಗಲಕೋಟೆಯ ನಿಂಗಪ್ಪ ಅಂಬಿಗೇರಾ(29) ಎಂದು ಗುರುತಿಸಲಾಗಿದೆ. ಇನ್ನೋರ್ವ ಆರೋಪಿ ನವೀನ್‌ಗೌಡ ಎಂಬಾತ ತಲೆಮರಿಸಿಕೊಂಡಿದ್ದಾನೆ.
ಈ ಮೂವರು ಆರೋಪಿಗಳು ಹುಡುಗಿಯರನ್ನು ಪುಸಲಾಯಿಸಿ ಕರೆ ತಂದು ಅನೈತಿಕ ಚಟುವಟಿಕೆ ನಡೆಸುತ್ತಿದ್ದರು ಎನ್ನಲಾಗಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಣಿಪಾಲ ಇನ್ಸ್‌ಪೆಕ್ಟರ್ ದೇವರಾಜ್ ಟಿ.ವಿ ನೇತೃತ್ವದ ಪೊಲೀಸರ ತಂಡವು ನಿನ್ನೆ ರಾತ್ರಿ ಹೆರ್ಗಾದ ಮನೆಗೆ ದಾಳಿ ನಡೆಸಿದೆ. ಬಂಧಿತ ಆರೋಪಿಗಳಿಂದ 2 ಮೊಬೈಲ್ ಪೋನ್, 15000 ರೂ. ನಗದು ಮತ್ತು ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.