ಉಡುಪಿ: ಗುಜರಾತ್‌ನ ಅಹಮದಾಬಾದ್ ಏರ್ ಪೋರ್ಟ್ ನಲ್ಲಿ ಸಿಬ್ಬಂದಿ ಸೇರಿ 242 ಮಂದಿ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಪತನಗೊಂಡಿದೆ. ಟೇಕಾಪ್ ಆದ ಕೆಲ ಹೊತ್ತಿನಲ್ಲೇ ವಿಮಾನ ಪತನಗೊಂಡಿದೆ. ಅಹಮದಾಬಾದ್ ನಿಂದ ಲಂಡನ್ ಗೆ ಪ್ರಯಾಣಿಸುತ್ತಿದ್ದ ಏರ್ ಇಂಡಿಯಾ ವಿಮಾನ ಅಪಘಾತಕ್ಕೀಡಾಗಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ವಿಮಾನದ ಹಿಂದಿನಭಾಗ ಮರಕ್ಕೆ ಬಡಿದು ವಿಮಾನ ನೆಲಕ್ಕಪಳಿಸಿದೆ ಎನ್ನಲಾಗಿದೆ.

