Home ಕರಾವಳಿ ಬಾರ್ಕೂರು ಮೊಗವೀರ ಮಹಿಳಾ ಸಂಘಟನೆಯ ಸ್ಥಾಪಕ ಮಹಿಳಾ ಅಧ್ಯಕ್ಷೆ ಗಿರಿಜಾ ವಿ ಕಾಂಚನ್ ನಿಧನ

ಬಾರ್ಕೂರು ಮೊಗವೀರ ಮಹಿಳಾ ಸಂಘಟನೆಯ ಸ್ಥಾಪಕ ಮಹಿಳಾ ಅಧ್ಯಕ್ಷೆ ಗಿರಿಜಾ ವಿ ಕಾಂಚನ್ ನಿಧನ

ಉಡುಪಿ: ಬಾರ್ಕೂರು ಮೊಗವೀರ ಮಹಿಳಾ ಸಂಘಟನೆಯ ಸ್ಥಾಪಕ ಮಹಿಳಾ ಅಧ್ಯಕ್ಷೆ, ಹೊಸಾಳ ಗ್ರಾಮದ ನಿವಾಸಿ ಗಿರಿಜಾ ವಿ ಕಾಂಚನ್ (76) ಅವರು ಹೃದಯಾಘಾತದಿಂದ ಮಣಿಪಾಲ ಆಸ್ಪತ್ರೆಯಲ್ಲಿ ಇಂದು ನಿಧನರಾದರು.

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು, ಮೂರು ದಿನಗಳ ಹಿಂದೆ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಮುಂಜಾನೆ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ.
ಮೃತರು ಪತಿ ಹಾಗೂ ಓರ್ವ ಪುತ್ರಿಯನ್ನು ಆಗಲಿದ್ದಾರೆ‌.

ಬಾರಕೂರು ಬೆಣ್ಣೆ ಕುದುರು ಮೊಗವೀರ ಮಹಿಳಾ ಸಂಘಟನೆಯ ಸ್ಥಾಪಕ ಅಧ್ಯಕ್ಷರಾಗಿದ್ದು, ಸತತ ಎಂಟು ವರ್ಷಗಳ ಕಾಲ ಮಹಿಳಾ ಸಂಘಟನೆ ಕಟ್ಟಿಕೊಂಡು. ಬೆಣ್ಣೆ ಕುದುರು, ಉಚ್ಚಿಲಮಹಾಲಕ್ಷ್ಮೀ, ಬಗ್ವಾಡಿ ಮೊದಲಾದ ದೇವಸ್ಥಾನಗಳ ಜಾತ್ರಾ ಮಹೋತ್ಸವಕ್ಕೆ ಮಹಿಳಾ ಸಂಘಟನೆಯೊಂದಿಗೆ ದೇವತಾ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು. ಬಾರ್ಕೂರು ಮೊಗವೀರ ಮಹಿಳಾ ಸೊಸೈಟಿಯ ಅಧ್ಯಕ್ಷೆಯಾಗಿ ಕೂಡ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದರು.

Exit mobile version