ಉಡುಪಿ: ನಗರದ ಗೀತಾಂಜಲಿ ಶೋಪರ್ ಸಿಟಿಯಲ್ಲಿರುವ ಪ್ರತಿಷ್ಠಿತ ಚಿನ್ನಾಭರಣಗಳ ಸಂಸ್ಥೆ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ನ ನವೀಕೃತ ಐಷಾರಾಮಿ ಮತ್ತು ವಿಶಾಲವಾದ ಉಡುಪಿ ಶೋರೂಂ ಅನ್ನು ಉಡುಪಿ ಹಾಗೂ ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಶನಿವಾರ ಉದ್ಘಾಟಿಸಿದರು.
ಬಳಿಕ ಮಾತನಾಡಿದ ಅವರು, ಮಲಬಾರ್ ಗೋಲ್ಡ್ ಸಂಸ್ಥೆಯು ಜಗತ್ತಿನ 11 ದೇಶಗಳಲ್ಲಿ 375 ಶೋರೂಂಗಳನ್ನು ಹೊಂದಿದ್ದು, ವಾರ್ಷಿಕ 51ಸಾವಿರ ಕೋಟಿ ರೂ. ವ್ಯವಹಾರ ಮಾಡುತ್ತಿದೆ. ಈ ರೀತಿಯ ವ್ಯವಹಾರ ಮಾಡುವ ಇನ್ನೊಂದು ಸಂಸ್ಥೆ ನಮ್ಮಲ್ಲಿ ಇಲ್ಲ. ಆ ಮಟ್ಟಕ್ಕೆ ಮಲಬಾರ್ ಗೋಲ್ಡ್ ಸಂಸ್ಥೆಯು ಬೆಳೆದು ನಿಂತಿದೆ ಎಂದು ಹೇಳಿದರು.ಸಂಸ್ಥೆಯು ವ್ಯವಹಾರದ ಜೊತೆ ಬಡವರ ನೆರವು ನೀಡುವ ಕಾರ್ಯ ದಲ್ಲಿಯೂ ತೊಡಗಿಸಿಕೊಂಡಿದೆ. ಈ ನವೀಕೃತ ಶೋರೂಂ ಗ್ರಾಹಕರಿಗೆ ಇನ್ನಷ್ಟು ಉತ್ತಮ ರೀತಿಯ ಸೇವೆಯನ್ನು ನೀಡುವಂತಾಗಲಿ. ಈ ಸಂಸ್ಥೆಯು ಉತ್ತಮ ಅಭಿವೃದ್ಧಿ ಕಾಣಲಿ ಎಂದು ಅವರು ಶುಭಹಾರೈಸಿದರು.
ಉಡುಪಿ ಶೋರೂಂ ಮುಖ್ಯಸ್ಥ ಹಫೀಝ್ ರೆಹಮಾನ್ ಮಾತನಾಡಿ, ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ 2013ರಲ್ಲಿ ಉಡುಪಿಯಲ್ಲಿ ಶಾಖೆ ಆರಂಭಿಸಿದ್ದು, 2018ರಲ್ಲಿ ಈ ಶೋರೂಂ ಗೀತಾಂಜಲಿ ಶೋಪರ್ ಸಿಟಿಗೆ ಸ್ಥಳಾಂತರಗೊಂಡಿತು. ಇದೀಗ 5000 ಚದರ ಅಡಿ ವಿಸ್ತ್ರೀರ್ಣ ಹೊಂದಿದ್ದ ಶೋರೂಂ 7000ಚದರ ಅಡಿ ವಿಸ್ತ್ರೀರ್ಣಕ್ಕೆ ವಿಸ್ತರಿಸಲಾಗಿದೆ. ಈ ಮೂಲಕ ಚಿನ್ನಾಭರಣಗಳ ಸಂಗ್ರಹವನ್ನು ಹೆಚ್ಚಿಸಲಾಗಿದೆ ಎಂದು ತಿಳಿಸಿದರು.
ಗ್ರಾಹಕರಾದ ಡಾ.ಚರಿಷ್ಮಾ ಶೆಟ್ಟಿ ಮೈನ್ ಡೈಮಂಡ್, ವಿದ್ಯಾ ಸರಸ್ವತಿ ಹಾಗೂ ಮಾಲಿನಿ ನಾಗೇಶ್ ಡಿವೈನ್ ಹೆರಿಟೇಜ್ ಜ್ಯುವೆಲ್ಲರಿ, ಎಡ್ನಾ ಜತ್ತನ್ನ ಹಾಗೂ ಶಶಿ ಲೋರಯ್ಯ, ರೂಪಾ ಪ್ರಮೋದ್ ಹೆಗ್ಡೆ ಎರಾ ಅನ್ಕಟ್ ಡೈಮಂಡ್ಸ್, ಪಲ್ಲವಿ ಪುರುಷೋತ್ತಮ್ ಪ್ರೆಶಿಯಾ ಜೆಮ್ಸ್ ಸ್ಟೋನ್, ನಜ್ಮಾ ನಝೀರ್ ಎಥ್ನಿಕ್ ಹ್ಯಾಂಡ್ಕ್ರಾಫ್ಟೆಡ್ ಡಿಸೈನ್ಸ್, ಇಂದಿರಾ ಜೀತೇಂದ್ರ ಶೆಟ್ಟಿ ಬೆಳ್ಳಿಯ ರಾಮನ ಮೂರ್ತಿಯನ್ನು ಖರೀದಿಸಿದ್ದು, ಇವುಗಳನ್ನು ಮುಖ್ಯ ಅತಿಥಿಗಳು ಗ್ರಾಹಕರಿಗೆ ಹಸ್ತಾಂತರಿಸಿದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಹಾಗೂ ಕಟ್ಟಡದ ಮಾಲಕ ಪುರುಷೋತ್ತಮ ಶೆಟ್ಟಿ, ಗೀತಾಂಜಲಿ ಸಿಲ್ಕ್ಸ್ನ ಮಾಲಕ ಸಂತೋಷ್ ವಾಗ್ಳೆ ಶುಭ ಹಾರೈಸಿದರು. ಮಲಬಾರ್ ಗೋಲ್ಡ್ ಡೈಮಂಡ್ಸ್ನ ಕರ್ನಾಟಕದ ಪ್ರಾದೇಶಿಕ ಮುಖ್ಯಸ್ಥ ಫಿಲ್ಸರ್ ಬಾಬು, ವಲಯ ಮುಖ್ಯಸ್ಥ ಸರ್ಫುದ್ದೀನ್, ಮಂಗಳೂರು ಶೋರೂಂ ಮುಖ್ಯಸ್ಥ ಶರಶ್ಚಂದ್ರ, ಕರ್ನಾಟಕ ಮಾರುಕಟ್ಟೆ ಮುಖ್ಯಸ್ಥ ಹುಝೈಲ್ ಅಹ್ಮದ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಉಡುಪಿ ಸ್ಟೋರ್ ಮೆನೇಜರ್ ಪುರುಂದರ ತಿಂಗಳಾಯ, ಜಿಆರ್ಎಂ ರಾಘವೇಂದ್ರ ನಾಯಕ್, ಡೈಮಂಡ್ ಉಸ್ತುವಾರಿ ಹರೀಶ್ ಎಂ.ಜಿ., ಮಾರುಕಟ್ಟೆ ಮೆನೇಜರ್ ತಂಝೀಮ್ ಶಿರ್ವ, ಸೇಲ್ಸ್ ಮೆನೇಜರ್ ಮುಸ್ತಫಾ ಎ.ಕೆ., ಹಿರಿಯರಾದ ಮುಹಮ್ಮದ್ ಅಡ್ಯಾರ್ ಮತ್ತು ಗ್ರಾಹಕರು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು. ನಯನಾ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.
ಉಡುಪಿ ಶೋರೂಂನಲ್ಲಿ ಅತ್ಯದ್ಭುತವಾದ ವಿನ್ಯಾಸಗಳ ಆಭರಣಗಳು ಸ್ಪರ್ಧಾತ್ಮಕ ಮತ್ತು ನ್ಯಾಯಯುತ ಬೆಲೆಯಲ್ಲಿ ಲಭ್ಯ ಇವೆ. ಸ್ಟೋರ್ನ ಪುನಾರಂಭದ ಪ್ರಯುಕ್ತ ಗ್ರಾಹಕರಿಗೆ ಪ್ರತೀ ಖರೀದಿಯೊಂದಿಗೆ ಉಚಿತ ಬೆಳ್ಳಿಯ ನಾಣ್ಯ ನೀಡಲಿದ್ದು, ಈ ಕೊಡುಗೆಯು ಜ.5ರವರೆಗೆ ಲಭ್ಯವಿದೆ. ವಜ್ರಾಭರಣಗಳ ಖರೀದಿ ಮೇಲೆ ಶೇ.25ರವರೆಗೆ ರಿಯಾಯಿತಿಯನ್ನು ನೀಡಲಾಗುತ್ತಿದೆ.
ಹಳೆಯ ಮೈನ್ ಡೈಮಂಡ್ ಆಭರಣಗಳ ವಿನಿಮಯಕ್ಕೆ ಶೇ.100ರಷ್ಟು ವಿನಿಮಯ ಮೌಲ್ಯವನ್ನು ಪಡೆದುಕೊಳ್ಳಬಹುದಾಗಿದೆ. ಈ ಶೋರೂಂನಲ್ಲಿ ಮಲಬಾರ್ ಜನಪ್ರಿಯ ಬ್ರ್ಯಾಂಡ್ಗಳಾದ ಮೈನ್ ಡೈಮಂಡ್ಸ್, ಎರಾ ಅನ್ಕಟ್ ಡೈಮಂಡ್ಸ್, ಡಿವೈನ್ ಹೆರಿಟೇಜ್ ಜ್ಯುವೆಲ್ಲರಿ, ಎಥ್ನಿಕ್ ಹ್ಯಾಂಡ್ಕ್ರಾಫ್ಟೆಡ್ ಡಿಸೈನ್ಸ್, ಪ್ರೆಸಿಯಾ ಜೇಮ್ಸ್ ಸ್ಟೋನ್ ಸಂಗ್ರಹಗಳು ಮತ್ತು ವಿರಾಝ್ ಪೋಲ್ಕಿ ಆಭರಣಗಳ ಸಂಗ್ರಹಗಳನ್ನು ಹೊಂದಿದೆ.
ತನ್ನ ಸಾಂಪ್ರದಾಯಿಕ ವಿನ್ಯಾಸಗಳು, ಸಮಕಾಲೀನ ಆಭರಣಗಳು ಅಥವಾ ಅತಿಹಗುರದ ಆಭರಣಗಳು, ದೈನಂದಿನ ಉಡುಗೆಯ ಆಭರಣಗಳು ಸೇರಿದಂತೆ ಗ್ರಾಹಕರ ಅಭಿರುಚಿಗೆ ಮತ್ತು ಎಲ್ಲಾ ಕಾಲಕ್ಕೆ ತಕ್ಕಂತಹ ಆಭರಣ ಗಳು ಈ ಉಡುಪಿ ಶೋರೂಂನಲ್ಲಿವೆ. ಈ ಶೋರೂಂನಲ್ಲಿ ಅತಿ ದೊಡ್ಡ ಪ್ರದರ್ಶನ ಮತ್ತು ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು, ಈ ಮೇಳ ಡಿ.28ರಿಂದ 2025ರ ಜನವರಿ 5 ರವರೆಗೆ ನಡೆಯಲಿದೆ