ಉಡುಪಿ: ಪೊಡವಿಗೊಡೆಯನ ನಾಡಿನಲ್ಲಿ ಅಷ್ಟಮಿಯ ಸಂಭ್ರಮ ಕಳೆಗಟ್ಟಿದ್ದು, ಶ್ರೀ ಕೃಷ್ಣಮಠದ ಆವರಣ ಸಹಿತ ಇಡೀ ನಗರದಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿದೆ. ಇಂದು ಬೆಳಿಗ್ಗೆಯಿಂದಲೇ ಅಷ್ಟಮಿಯ ವೈಭವ ಕಂಡುಬರುತ್ತಿದೆ.
ಶ್ರೀ ಕೃಷ್ಣಮಠ ಪರ್ಯಾಯ ಪುತ್ತಿಗೆ ಮಠದ ವತಿಯಿಂದ ಮಠದೊಳಗೆ ನಡೆಯುವ ವಿವಿಧ ಧಾರ್ಮಿಕ ಕಾರ್ಯಕ್ರಮ, ಒಳಗಿನ ಅಲಂಕಾರ, ನೈವೇದ್ಯ ಹಾಗೂ ಪ್ರಸಾದದ ರೂಪದಲ್ಲಿ ನೀಡುವ ಲಡ್ಡು, ಚಕ್ಕುಲಿ ಇತ್ಯಾದಿಗಳ ಸಿದ್ದತೆ ಭರದಿಂದ ಸಾಗಿದೆ. ಬೆಳಗ್ಗೆಯಿಂದಲೇ ಶ್ರೀ ಕೃಷ್ಣಮಠದಲ್ಲಿ ಅಷ್ಟಮಿ ಸಂಭ್ರಮ ಡೋಲು ಉತ್ಸವದೊಂದಿಗೆ ಆರಂಭಗೊಂಡು ಮಂಗಳವಾರ ವಿಟ್ಲಪಿಂಡಿ ಉತ್ಸವ ಮುಗಿಯುವವರೆಗೂ ಇರಲಿದೆ. ಬೆಳಿಗ್ಗಿನಿಂದಲೇ ಅಲ್ಲಲ್ಲಿ ವೇಷಧಾರಿಗಳು ನಗರಸಂಚಾರ ಮಾಡತೊಡಗಿದ್ದಾರೆ.
ಇಂದು ಮಠದಲ್ಲಿ ಮುದ್ದುಕೃಷ್ಣ,ಮುದ್ದುರಾಧೆ ಸ್ಪರ್ಧೆಗಳು ಇಡೀ ದಿನ ನಡೆಯಲಿದ್ದು ನೂರಾರು ಪುಟಾಣಿಗಳು ಇದಕ್ಕಾಗಿ ತಯಾರಿ ನಡೆಸಿದ್ದಾರೆ.