Sunday, November 24, 2024

ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಮಾಲೀಕ ಡಾ.ಸತೀಶ ಪೂಜಾರಿ ಹೃದಯಾಘಾತದಿಂದ ನಿಧನ

Must read

ಉಡುಪಿ: ಕುಂದಾಪುರ ಶ್ರೀಮಾತಾ ಆಸ್ಪತ್ರೆಯ ಆಡಳಿತ ಪಾಲುದಾರ, ಖ್ಯಾತ ಇ.ಎನ್.ಟಿ. ತಜ್ಞ  ಡಾ.ಸತೀಶ ಪೂಜಾರಿ ಸಾಸ್ತಾನ ಅವರು ಗುರುವಾರ ಮುಂಜಾನೆ ಹೃದಯಾಘಾತದಿಂದ ಕೋಟ ಮಣೂರು ಸ್ವಗೃಹದಲ್ಲಿ ನಿಧನ ಹೊಂದಿದರು. ಅವರಿಗೆ 52 ವಯಸ್ಸಾಗಿತ್ತು.

ಇವರು ಕುಂದಾಪುರ ಶ್ರೀಮಾತಾ ಆಸ್ಪತ್ರೆ, ಕೋಟ ಮನಸ್ಮಿತಾ ಫೌಂಡೇಶನ್ ಮೊದಲಾದ ಸಂಸ್ಥೆಗಳ ಆಡಳಿತ ಪಾಲುದಾರರಾಗಿದ್ದರು. ಹವ್ಯಾಸಿ ಗಾಯಕರಾಗಿದ್ದ ಇವರು ಹಲವಾರು ಆಲ್ಬಂ ಸಾಂಗ್ ಗಳಿಗೆ, ಭಕ್ತಿಗೀತೆಗಳಿಗೆ ಧ್ವನಿಯಾಗಿದ್ದರು. ಸಂಗೀತ ರಸಮಂಜರಿಗಳಲ್ಲೂ ಕಾರ್ಯಕ್ರಮ ನೀಡಿದ್ದಾರೆ. ಬಿಲ್ಲವ ಯುವ ವೇದಿಕೆಯ ಸ್ಥಾಪಕ ಅಧ್ಯಕ್ಷರಾಗಿದ್ದರು.

ಡಾ. ಎಸ್. ಜಾನಕಿ ಅವರ ಕಟ್ಟಾ ಅಭಿಮಾನಿಯಾಗಿ ಪ್ರತಿ ವರ್ಷ ಕೋಟೇಶ್ವರದಲ್ಲಿ ಡಾ. ಎಸ್. ಜಾನಕಿ ರಾಷ್ಟ್ರೀಯ ಪುರಸ್ಕಾರ ಆಯೋಜಿಸಿ ನಾಡಿನ ಹಲವು ಮಂದಿ ಗಣ್ಯ ಹಾಡುಗಾರರಿಗೆ ಪ್ರಶಸ್ತಿ ಪ್ರದಾನ ಮಾಡಿದ್ದರು. ಮನಸ್ಮಿತಾ ಫೌಂಡೇಶನ್ ಮೂಲಕ ಸಮಾಜ ಸೇವೆಯಲ್ಲೂ ತೊಡಗಿಕೊಂಡಿದ್ದರು.
ಮೃತರು, ಪತ್ನಿ, ಪುತ್ರನನ್ನು ಅಗಲಿದ್ದಾರೆ. ಇಂದು ಸಂಜೆ 4.30 ರಿಂದ ಮೃತರ ಸ್ವಗೃಹ ಕೋಟ ಮಣೂರಿನಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಕುಟುಂಬ ಮೂಲಗಳು ತಿಳಿಸಿದೆ.

spot_img

More articles

LEAVE A REPLY

Please enter your comment!
Please enter your name here