Thursday, December 5, 2024

ಬ್ರಹ್ಮಾವರ ಜಿ.ಎಂ. ಗ್ಲೋಬಲ್ ಸ್ಕೂಲ್ ನಲ್ಲಿ ವಿಶ್ವ ಯೋಗ ದಿನಾಚರಣೆ

Must read

ಉಡುಪಿ: ಬ್ರಹ್ಮಾವರ ಜಿ.ಎಂ. ಗ್ಲೋಬಲ್ ಸ್ಕೂಲ್ ನಲ್ಲಿ ಹತ್ತನೆ ವಿಶ್ವ ಯೋಗ ದಿನಾಚರಣೆಯನ್ನು ಇಂದು ಆಚರಿಸಲಾಯಿತು.
ಪ್ರಾಂಶುಪಾಲ ಪ್ರಣವ್ ಶೆಟ್ಟಿ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ “ಯೋಗ, ಭಾರತದ ಪ್ರಾಚೀನ ಮತ್ತು ಸನಾತನ ವಿದ್ಯೆ, ವೇದಕಾಲಕ್ಕಿಂತಲೂ ಹಿಂದೆ ಯೋಗಾಸನಗಳು ರೂಢಿಯಲ್ಲಿದ್ದವು. ಇಂದು ಭಾರತವು ಯೋಗಾಸನ ಕ್ಷೇತ್ರದಲ್ಲಿ ವಿಶ್ವಕ್ಕೆ ಗುರುಸ್ಥಾನದಲ್ಲಿದೆ ಹಾಗೂ ಯೋಗಕ್ಕೆ ವಿಶ್ವಮಾನ್ಯತೆ ಇದೆ. ಶಿಸ್ತಿನ ಜೀವನವನ್ನು ನಡೆಸುವುದೇ ಒಂದು ಯೋಗ” ಎಂದರು.

ಮೂಡುಬಿದಿರೆ ಎಕ್ಸಲೆಂಟ್ ಸಿಬಿಎಸ್‌ ಇ ಶಾಲೆಯ ಸಹಶಿಕ್ಷಕಿ, ಯೋಗ ತರಬೇತುದಾರರಾದ ಮಮತಾ ಗಣೇಶ್ ಅವರು ಮಾತನಾಡಿ, ಅಷ್ಟಾಂಗ ಯೋಗ ಪರಿಪಾಲನೆ ನಿಮ್ಮಲ್ಲಿ ಬೆಳೆಸಿಕೊಳ್ಳಿ ಎಂಬ ಧೈಯ ವಾಕ್ಯದೊಂದಿಗೆ ಯೋಗಾಭ್ಯಾಸದ ಆಸನಗಳನ್ನು ಮನೋಜ್ಞವಾಗಿ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಜಿ.ಎಂ. ಗ್ಲೋಬಲ್ ಶಾಲಾ ಸಂಸ್ಥಾಪಕರು ಹಾಗೂ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ವಿಶ್ವ ಆರೋಗ್ಯಕ್ಕಾಗಿ ಯೋಗ, ಸದೃಢ ಮನಸ್ಸಿಗಾಗಿ ನಿರಂತರವಾಗಿ ಯೋಗಾಭ್ಯಾಸವನ್ನು ಮಾಡಿ ಎಂದು ತಿಳಿಸಿದರು. ಯೋಗದಿಂದ ರೋಗಮುಕ್ತರಾಗಿ ಆರೋಗ್ಯವನ್ನು ಕಾಪಾಡಿಕೊಳ್ಳಿ ಎಂದು ಶಿಕ್ಷಕರು ಹಾಗೂ ವಿದ್ಯಾರ್ಥಿಗಳಿಗೆ ಕರೆನೀಡಿದರು. ವಿದ್ಯಾರ್ಥಿನಿ ಮಾನ್ಯತಾ ಯೋಗದ ಮಹತ್ವದ ಕುರಿತು ತನ್ನ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ವಿದ್ಯಾರ್ಥಿ ಕೌಶಿಕ್ ಕಾರ್ಯಕ್ರಮವನ್ನು ನಿರೂಪಿಸಿದರು. ವಿದ್ಯಾರ್ಥಿ ಸ್ಮಯನ್ ಶೆಟ್ಟಿ ಸ್ವಾಗತ ಭಾಷಣ ನಡೆಸಿಕೊಟ್ಟರು. ಶಿವಾನಿ ಪಾಟೀಲ್ ಧನ್ಯವಾದ ಸಮರ್ಪಿಸಿದರು.

spot_img

More articles

LEAVE A REPLY

Please enter your comment!
Please enter your name here