Tuesday, December 3, 2024

ಉಡುಪಿ: ಡೆತ್ ನೋಟ್ ಬರೆದಿಟ್ಟು ಮಹಿಳೆ ನೇಣಿಗೆ ಶರಣು

Must read

ಉಡುಪಿ: ಮಾನಸಿಕವಾಗಿ ನೊಂದ ಮಹಿಳೆಯೊರ್ವಳು ಮನೆಯ ಅಡಿಗೆ ಮನೆಯ ಮಾಡಿನ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊರಂಗ್ರಪಾಡಿಯ ಸಾಯಿಬಾಬ ಮಂದಿರದ ಬಳಿ ನಡೆದಿದೆ.

ಕೊರಂಗ್ರಪಾಡಿಯ ಸಾಯಿಬಾಬ ಮಂದಿರದ ಬಳಿಯ ನಿವಾಸಿ ಭಾರತಿ ಶೆಟ್ಟಿಗಾರ್ (53) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಇವರು ನೇಕಾರಿಕೆ ಕೆಲಸ ಮಾಡಿಕೊಂಡಿದ್ದರು. ಆತ್ಮಹತ್ಯೆ ಮಾಡಿಕೊಳ್ಳುವ ಬಗ್ಗೆ ನೆರೆಮನೆಯವರಿಗೆ ಪೋನ್ ಕರೆ ಮಾಡಿ ತಿಳಿಸಿದ್ದರು. ಆದರೆ, ನೆರೆಮನೆಯವರು ಬಂದು ನೋಡುವಾಗ ಭಾರತಿ ಅವರು ಮೃತಪಟ್ಟಿದ್ದರು.

ಮೃತದೇಹದ ಬಳಿ ಡೆತ್ ನೋಟ್ ಪತ್ತೆಯಾಗಿದ್ದು, ಅದರಲ್ಲಿ 500 ರೂ ಬೈಲೂರು ಮಹಿಷಿಮರ್ಧಿನಿ ದೇವಸ್ಥಾನದಲ್ಲಿ ನಡೆಯುವ ಹೂವಿನ ಪೂಜೆಗೆ ಮತ್ತು 200 ರೂಪಾಯಿ ದಿನ ಪತ್ರಿಕೆಯ ತಿಂಗಳ ಬಿಲ್ಲು ಪಾವತಿಸಬೇಕು. ಹಾಗೆಯೇ ಗಂಡನ ಪೋಷಣೆಗೆ ನನ್ನ ಚಿನ್ನ, ಹಣ ಸಾಕು ಎಂದು ಬರೆಯಲಾಗಿದೆ.

ಘಟನಾಸ್ಥಳಕ್ಕೆ ಎ.ಎಸ್.ಐ ವಿಜಯ, ತನಿಖಾ ಸಹಾಯಕರಾಗಿರುವ ನೇತ್ರ, ಶಿವಕುಮಾರ ಆಗಮಿಸಿ ಕಾನೂನು ಪ್ರಕ್ರಿಯೆ ನಡೆಸಿದರು. ಸಮಾಜಸೇವಕ ನಿತ್ಯಾನಂದ ಒಳಕಾಡುವರು ಶವವನ್ನು ಅಜ್ಜರಕಾಡಿನ ವೈದ್ಯಕೀಯ ಪರೀಕ್ಷಾ ಕೇಂದ್ರಕ್ಕೆ ಸಾಗಿಸಲು, ಉಚಿತ ಆ್ಯಂಬುಲೆನ್ಸ್ ಸೇವೆ ನೀಡಿ ಇಲಾಖೆಗೆ ನೆರವಾದರು.

spot_img

More articles

LEAVE A REPLY

Please enter your comment!
Please enter your name here