Friday, November 15, 2024

ಎಸ್ಸೆಸ್ಸೆಲ್ಸಿ ಪರೀಕ್ಷೆ: ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಆಂಗ್ಲ ಮಾಧ್ಯಮ ಶಾಲೆ ಶೇ.100 ಫಲಿತಾಂಶ

Must read

ಉಡುಪಿ: ಕುಂದಾಪುರದ ಎಕ್ಸಲೆಂಟ್ ಮತ್ತು ಲಿಟ್ಲಸ್ಟಾರ್ ಅಂಗ್ಲ ಮಾಧ್ಯಮ ಶಾಲೆಯು ಶೇ. 100 ಫಲಿತಾಂಶವನ್ನು ದಾಖಲಿಸಿದೆ. ಪ್ರಥ್ವಿತಾ ಪಿ. ಶೆಟ್ಟಿ 621 (ಶೇ. 99.36) ಅಂಕ ಪಡೆದು ರಾಜ್ಯಕ್ಕೆ 5ನೇ ರ‌್ಯಾಂಕ್ ಗಳಿಸಿದ್ದು, ಕುಂದಾಪುರ ತಾಲೂಕಿಗೆ ಪ್ರಥಮ ಸ್ಥಾನ ಗಳಿಸಿದ್ದಾರೆ. ಶಾಧನಾ ದೇವಾಡಿಗ 616 (98.56%) ಅಂಕ‌ ಗಳಿಸುವ ಮೂಲಕ ರಾಜ್ಯಕ್ಕೆ 10ನೇ ರ‌್ಯಾಂಕ್ ಹಾಗೂ ಕುಂದಾಪುರ ತಾಲೂಕಿಗೆ 6ನೇ ಸ್ಥಾನ ಪಡೆದಿದ್ದಾರೆ.

ಬಸನಗೌಡ ಪಾಟೀಲ್ 610 (97.6), ಕೆ. ಶ್ರೀಶಾ ಶೆಟ್ಟಿ 610 (97.6), ನಿಝಾ 608 (97.28), ಸನ್ನಿಧಿ 606 (96.96), ಸುಶ್ಮಿತಾ ಸುಕಾಲಿ 605 (96.8), ದಿವಿತ್ ಕುಮಾರ್ ಶೆಟ್ಟಿ 602 (96.32), ಸೃಜನ್ ಜೆ. ಶೆಟ್ಟಿ 601 (96.16), ಐಶ್ವರ್ಯ ಬಿ ಆಚಾರ್ಯ 591 (94.56), ಸನ್ಸಿತಾ 588 (94.08), ಸಂದೀಪ್ ರೆಡ್ಡಿ ವಿ 587 (93.92), ವಿದ್ಯಾಶ್ರೀ 585 (93.60), ಕೃತಿ ಕೆ. ಶೆಟ್ಟಿ 582 (93.12), ಲತಿಕಾ 581 (92.96) ಅಂಕ ಪಡೆದುಕೊಂಡಿದ್ದಾರೆ.

ಸಂಸ್ಥೆಯಲ್ಲಿ ಪರೀಕ್ಷೆ ಬರೆದ 79 ವಿದ್ಯಾರ್ಥಿಗಳಲ್ಲಿ ವಿಶಿಷ್ಟ ಶ್ರೇಣಿಯಲ್ಲಿ 38 ವಿದ್ಯಾರ್ಥಿಗಳು, ಪ್ರಥಮ ಶ್ರೇಣಿಯಲ್ಲಿ 40 ವಿದ್ಯಾರ್ಥಿಗಳು, ದ್ವಿತೀಯ ಶ್ರೇಣಿಯಲ್ಲಿ 01 ವಿದ್ಯಾರ್ಥಿಯು ತೇರ್ಗಡೆ ಹೊಂದಿದ್ದಾನೆ. ವಿದ್ಯಾರ್ಥಿಗಳ ಈ ಅಭೂತಪೂರ್ವ ಸಾಧನೆಗೆ ಎಮ್.ಎಮ್ ಹೆಗ್ಡೆ ಎಜುಕೇಶನಲ್ ಆ್ಯಂಡ್ ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಎಮ್. ಮಹೇಶ್ ಹೆಗ್ಡೆ, ಸುಜ್ಞಾನ ಎಜುಕೇಶನಲ್ ಟ್ರಸ್ಟ್‌ನ ಅಧ್ಯಕ್ಷರಾದ ಡಾ. ರಮೇಶ್ ಶೆಟ್ಟಿ, ಕಾರ್ಯದರ್ಶಿ ಪ್ರತಾಪ್ ಚಂದ್ರ ಶೆಟ್ಟಿ, ಖಜಾಂಚಿ ಭರತ್ ಶೆಟ್ಟಿ ಹಾಗೂ ಮುಖೋಪಾಧ್ಯಾಯರು ಸಂತಸ ವ್ಯಕ್ತಪಡಿಸುವುದರ ಮೂಲಕ ಶುಭ ಹಾರೈಸಿದ್ದಾರೆ. ವಿದ್ಯಾರ್ಥಿಗಳ ಅಪೂರ್ವ ಸಾಧನೆಗೆ ಕಾರಣಿಕರ್ತರಾದ ಅಧ್ಯಾಪಕ ವರ್ಗ ಶಾಲಾ ಸಿಬ್ಬಂದಿಗಳು ಮತ್ತು ಪೋಷಕರು ಹರ್ಷ ವ್ಯಕ್ತಪಡಿಸಿದ್ದಾರೆ.

ನಮ್ಮ ಶಾಲೆಯ ಶಿಕ್ಷಕರು ಸಂಜೆ 6 ರ ತನಕ ನಮ್ಮ ಜೊತೆ ನಿಂತು ನಿರಂತರ ತರಬೇತಿ ನೀಡಿರುವುದು ಈ ಅಂಕ ಗಳಿಸಲು ಸಹಕಾರಿಯಾಯಿತು, ಮತ್ತು ನನ್ನ ಸಾಧನೆಗೆ ಬೆನ್ನೆಲುಬಾಗಿ ನಿಂತಿರುವ ಶಾಲೆಯ ಆಡಳಿತ ಮಂಡಳಿ, ಭೋದಕ, ಭೋದಕೇತರ ಸಿಬ್ಬಂಧಿ ವರ್ಗ ಮತ್ತು ಪೋಷಕರಿಗೆ ಚಿರರುಣಿಯಾಗಿದ್ದೇನೆ ಎಂದು ಪ್ರಥ್ವಿತಾ ಪಿ ಶೆಟ್ಟಿ ಹೇಳಿದ್ದಾರೆ.

spot_img

More articles

LEAVE A REPLY

Please enter your comment!
Please enter your name here