Thursday, September 19, 2024

ಉಡುಪಿ: ಎ.9ರಿಂದ18ರ ವರೆಗೆ ಶೀರೂರು ಮೂಲ ಮಠದಲ್ಲಿ ಶ್ರೀ ರಾಮನವಮಿ ಮಹೋತ್ಸವ

Must read

ಉಡುಪಿ: ಶೀರೂರು ಮೂಲ ಮಠದ ಆಶ್ರಯದಲ್ಲಿ ಶೀರೂರು ಮಠಾಧೀಶರಾದ ವೇದವರ್ಧನತೀರ್ಥ ಶ್ರೀಪಾದರ ನೇತೃತ್ವದಲ್ಲಿ ಶ್ರೀ ರಾಮ ನವಮಿ ಮಹೋತ್ಸವ ಇದೇ ಬರುವ ಎ.9ರಿಂದ ಎ.18ರ ವರೆಗೆ ಹರಿಖಂಡಿಗೆಯ ಶೀರೂರು ಮೂಲ ಮಠದಲ್ಲಿ ನಡೆಯಲಿದೆ ಎಂದು ಶೀರೂರು ಮಠದ ದಿವಾನರಾದ ಡಾ. ಎಂ.ಉದಯ ಕುಮಾರ್ ಸರಳತ್ತಾಯ ತಿಳಿಸಿದರು.

ಉಡುಪಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ‌ ಮಾತನಾಡಿದ ಅವರು, ಸುಮಾರು 70 ವರ್ಷಗಳ ಹಿಂದೆ ಶೀರೂರು ಮಠಾಧೀಶರಾಗಿದ್ದ ಲಕ್ಷ್ಮೀಂದ್ರತೀರ್ಥ ಶ್ರೀಪಾದರು ಆರಂಭಿಸಿದ್ದ ಶ್ರೀರಾಮ ನವಮಿ ರಥೋತ್ಸವದ ಸವಿನೆನಪಿಗಾಗಿ ಈ ಮಹೋತ್ಸವವನ್ನು ಆಯೋಜಿಸಲಾಗಿದೆ ಎಂದರು.

ಎ.11ರ ಸಂಜೆ 4ಕ್ಕೆೆ ಶ್ರೀ ಚಿತ್ರಾಪುರ ಮಠದ ವಿದ್ಯೇಂದ್ರ ಶ್ರೀಪಾದರು, ಎ. 13ಕ್ಕೆೆ ಕಾಣಿಯೂರು ಮಠದ ವಿದ್ಯಾವಲ್ಲಭತೀರ್ಥ ಶ್ರೀಪಾದರು, 14ರಂದು ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಹಾಗೂ 17ರಂದು ನಡೆಯುವ ರಥೋತ್ಸವದಲ್ಲಿ ಕೃಷ್ಣಾಪುರ ಮಠದ ವಿದ್ಯಾಸಾಗರ ತೀರ್ಥ ಶ್ರೀಪಾದರು ಭಾಗವಹಿಸಲಿದ್ದಾರೆ.

ಎ.10ರಿಂದ 18ರ ವರೆಗೆ ಹಯಗ್ರೀವ ಮಂತ್ರ ಹೋಮ, ಶಾಕಲ ಋಕ್ ಸಂಹಿತಾಯಾಗ, ಘೋಷ್ಠಿಪಾರಾಯಣ, ಲಕ್ಷ್ಮೀಶೋಭಾನೆ ಗಾಯನ ಜರುಗಲಿದ್ದು, ಎ.13ರಂದು ಭೂತರಾಜರ ಪೂಜೆ, ಎ.17ರಂದು ಅನ್ನಸಂತರ್ಪಣೆ ನಡೆಯಲಿದೆ. ಎ.18ರಂದು ಬೆಳಿಗ್ಗೆೆ 9ಕ್ಕೆೆ ಹಗಲು ರಥೋತ್ಸವ, ಅವಭೃತ ಸ್ನಾನ ಹಾಗೂ ರಾತ್ರಿ 9ಕ್ಕೆೆ ಬೊಬ್ಬರ್ಯ ನೇಮ ನೆರವೇರಲಿದೆ ಎಂದು ಅವರು‌ ತಿಳಿಸಿದರು.

ಎ.9ರಂದು ಕುಣಿತ ಭಜನೆ ಮತ್ತು ಭಕ್ತಿರಸಮಂಜರಿ, ಎ.10ರಂದು ಕುಂಜಾರುಗಿರಿ ಬಳಗದಿಂದ ಛತ್ರಪತಿ ಶಿವಾಜಿ ಐತಿಹಾಸಿಕ ನಾಟಕ, ಎ.11ರಂದು ಶ್ರೀಗಂಗಾ ಶಶಿಧರನ್ ಅವರ ವಯಲಿನ್ ವಾದನ, ಎ.12ರಂದು ಮಾರ್ಪಳ್ಳಿ ಚಂಡೆ ಬಳಗದವರಿಂದ ಊರ ಪರ್ಬ ನಾಟಕ, ಎ.13ರಂದು ಸುಧೀರ್ ಕೊಡವೂರು ಅವರ ತಂಡದಿಂದ ಶ್ರೀನರಸಿಂಹ ನೃತ್ಯ ರೂಪಕ, ಎ.14ರಂದು ಕುದ್ರೋಳಿ ಗಣೇಶ್ ಅವರಿಂದ ಮ್ಯಾಾಜಿಕ್ ಶೋ, ಎ.15ರಂದು ಮೈಸೂರು ರಾಮಚಂದ್ರ ಆಚಾರ್ಯ ಅವರಿಂದ ಭಕ್ತಿಿ ಸಂಗೀತ, ಎ.16ರಂದು ಪದ್ಮಶ್ರೀ ಪಂಡಿತ್ ವೆಂಕಟೇಶ್ ಕುಮಾರ್ ಅವರಿಂದ ಹಿಂದುಸ್ಥಾನಿ ಗಾಯನ, ಎ.17ರಂದು ಸಾಯಿ ವಿಘ್ನೇಶ್ ಅವರಿಂದ ಸಂಗೀತ, ಕಟೀಲು ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ಬಯಲಾಟ ನಡೆಯಲಿದೆ. ಪ್ರತೀ ದಿನ ಸಂಜೆ ಭಕ್ತರಿಗೆ ಫಲಹಾರದ ವ್ಯವಸ್ಥೆೆ ಮತ್ತು ಭಕ್ತರ ಅನುಕೂಲಕ್ಕಾಗಿ ಸಂಜೆ 5.30ರಿಂದ ರಾತ್ರಿ 9ರವರೆಗೆ ಶೀರೂರಿನಿಂದ ಉಡುಪಿ ತನಕ ಬಸ್ ವ್ಯವಸ್ಥೆೆ ಕಲ್ಪಿಸಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮ್ಯಾನೇಜರ್ ವಾಸುದೇವ ಆಚಾರ್ಯ, ಶೀರೂರು ಕೆಳಮಠದ ವಾಮನಮೂರ್ತಿ, ಪ್ರಮುಖರಾದ ಶ್ರೀಶ ಭಟ್ ಕಡೆಕಾರ್, ಅಶ್ವಥ್ ಭಾರಧ್ವಜ್ ಇದ್ದರು.

spot_img

More articles

LEAVE A REPLY

Please enter your comment!
Please enter your name here