Tuesday, December 3, 2024

ಉಡುಪಿ: ಮಾರ್ಚ್ 23ರ ‘ವಿಶ್ವಾರ್ಪಣಮ್’ ಹಾಗೂ ಪೇಜಾವರ ಶ್ರೀಪಾದರಿಗೆ ‘ಗುರುವಂದನೆ’ ಕಾರ್ಯಕ್ರಮ

Must read

ಉಡುಪಿ: ಶ್ರೀಕೃಷ್ಣ ಸೇವಾ ಬಳಗ, ಅದಮಾರು ಮಠ ಉಡುಪಿ ಇದರ ವತಿಯಿಂದ ಇದೇ ಮಾರ್ಚ್ 23ರ ಶನಿವಾರ ಮಧ್ಯಾಹ್ನ 3.30ಕ್ಕೆ ಉಡುಪಿ ಪೂರ್ಣಪ್ರಜ್ಞ ಆಡಿಟೋರಿಯಂನಲ್ಲಿ ಆಯೋಜಿಸಿರುವ ‘ವಿಶ್ವಾರ್ಪಣಮ್’ (ಚಿಂತನ-ಮಂಥನ-ಸಂವಾದ) ಕಾರ್ಯಕ್ರಮದಲ್ಲಿ ಅಯೋಧ್ಯೆಯಲ್ಲಿ ಶ್ರೀರಾಮಲಲ್ಲನ ಪ್ರತಿಷ್ಠಾಪನೆ ಮತ್ತು ಮಂಡಲೋತ್ಸವವನ್ನು ಪೂರೈಸಿ ಉಡುಪಿಗೆ ಆಗಮಿಸಿದ ಪೇಜಾವರ ಮಠಾಧೀಶರಾದ ವಿಶ್ವಪ್ರಸನ್ನತೀರ್ಥ ಶ್ರೀಪಾದರಿಗೆ ‘ಗುರುವಂದನೆ’ ಕಾರ್ಯಕ್ರಮ ನಡೆಯಲಿದೆ.

ಉಡುಪಿ ಅದಮಾರು ಮಠದ ಗೆಸ್ಟ್ ಹೌಸ್ ನಲ್ಲಿ ಇಂದು ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದ ವಿಶ್ವಾರ್ಪಣಮ್ ಕಾರ್ಯಕ್ರಮದ ಸಂಚಾಲಕ ಗೋವಿಂದರಾಜ್ ಅವರು, ಅದಮಾರು ಮಠದ ಹಿರಿಯ ಮಠಾಧೀಶರಾದ ವಿಶ್ವಪ್ರಿಯತೀರ್ಥ ಶ್ರೀಪಾದರು ಹಾಗೂ ಕಿರಿಯ ಮಠಾಧೀಶರಾದ ಈಶಪ್ರಿಯತೀರ್ಥ ಶ್ರೀಪಾದರು ಗೋಪೂಜೆ ನಡೆಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಬಳಿಕ ಧಾರ್ಮಿಕ ಚಿಂತಕ ಪ್ರಕಾಶ್ ಮಲ್ಪೆ “ಜಗಜ್ಜನನಿ ಭಾರತ” ಹಾಗೂ ವಾಗ್ಮಿ, ಪತ್ರಕರ್ತ ಶ್ರೀಕಾಂತ್ ಶೆಟ್ಟಿ ಅವರು ‘ಅವಿನಾಶಿ ಭಾರತ’ ಎಂಬ ವಿಷಯದ ಕುರಿತು ಮಾತನಾಡಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಸಾಧಕರಾದ ನಿವೃತ್ತ ಪ್ರಾಧ್ಯಾಪಕ ಬಿ. ಎಂ. ಸೋಮಯಾಜಿ ಹಾಗೂ ಲೆಕ್ಕರಿಶೋಧಕ ವಿ. ಕೆ. ಹರಿದಾಸ್ ಅವರನ್ನು ಸನ್ಮಾನಿಸಲಾಗುವುದು. ಕಾರ್ಯಕ್ರಮದ ಬಳಿಕ ಶ್ರೀಪಾದರು ಅಯೋಧ್ಯೆಯ ಶ್ರೀರಾಮನ ಮಂತ್ರಾಕ್ಷತೆಯನ್ನು ವಿತರಣೆ ಮಾಡಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಕಾರ್ಯಕ್ರಮ ಆಯೋಜನೆ ಸಮಿತಿಯ
ವಿಷ್ಣುಪ್ರಸಾದ್ ಪಾಡಿಗಾರ್, ಓಂಪ್ರಕಾಶ್, ನಟೇಶ್, ಶ್ಯಾಂಪ್ರಸಾದ್ ಕುಡ್ವ, ಅಜಿತ್, ಸುಮಿತ್ರಾ ಕೆರೆಮಠ, ನಳಿನಿ ಪ್ರದೀಪ್ ರಾವ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here