Sunday, September 22, 2024

ಕಾಂಗ್ರೆಸ್ ಸರಕಾರದ ಪತನದ ಕನಸು ಕಾಣುತ್ತಿರುವ ಶೋಭಾ ಕರಂದ್ಲಾಜೆ ಮೊದಲು ತಮ್ಮ ಸ್ಥಾನ ಭದ್ರಪಡಿಸಿಕೊಳ್ಳಲಿ: ರಮೇಶ್ ಕಾಂಚನ್ ತಿರುಗೇಟು

Must read

ಉಡುಪಿ: ಕಾಂಗ್ರೆಸ್ ಸರಕಾರ ಪತನದ ಚಿಂತೆ ಮಾಡುತ್ತಿರುವ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಮೊದಲು ತಮ್ಮ ಸ್ಥಾನವನ್ನು ಭದ್ರಪಡಿಸುವ ಕಡೆಗೆ ಗಮನಕೊಡಲಿ ಎಂದು ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ರಮೇಶ್ ಕಾಂಚನ್ ಹೇಳಿದ್ದಾರೆ.

ಲೋಕಸಭಾ ಚುನಾವಣೆಯ ಬಳಿಕ ಕರ್ನಾಟಕ ರಾಜ್ಯದ ಕಾಂಗ್ರೆಸ್ ನೇತೃತ್ವದ ಸರಕಾರ ಪತನವಾಗಲಿದೆ ಎಂಬ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿಕೆಗೆ ತಿರುಗೇಟು ನೀಡಿದ ಅವರು, ಕರ್ನಾಟಕ ರಾಜ್ಯದ ಕಾಂಗ್ರೆಸ್ ಸರಕಾರ ನುಡಿದಂತೆ ಜನತೆಗೆ ಐದು ಗ್ಯಾರಂಟಿ ಯೋಜನೆಗಳನ್ನು ಜಾರಿಗೆಗೊಳಿಸಿ ಜನರ ಮನ್ನಣೆಗೆ ಪಾತ್ರವಾಗುತ್ತಿದೆ. ಇದನ್ನು ಸಹಿಸಲು ಸಾಧ್ಯವಾಗದ ಸಚಿವೆ ಇಲ್ಲಸಲ್ಲದ ಹೇಳಿಕೆಗಳ ಮೂಲಕ ದಾರಿತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಇದು ಶೋಭಾ ಅವರ ಹತಾಶೆಯ ಪರಮವಾಧಿ. ತಮ್ಮ ಸ್ಥಾನ ಉಳಿಸಿಕೊಳ್ಳಲು ಪರದಾಡುತ್ತಿರುವ ಅವರು, ರಾಜ್ಯ ಸರಕಾರದ ವಿರುದ್ದ ಮಾತನಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ವಾಗ್ದಾಳಿ ನಡೆಸಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಕನಿಷ್ಠ 20 ಸ್ಥಾನಗಳನ್ನಾದರೂ ಗೆಲ್ಲಿಸುವುದರ ಮೂಲಕ ರಾಜ್ಯದ ಜನತೆ ಬಿಜೆಪಿಗೆ ಸೂಕ್ತ ಪಾಠ ಕಲಿಸಲಿದ್ದಾರೆ. ಸೂಕ್ತ ಸಂಖ್ಯಾಬಲದೊಂದಿಗೆ ರಾಜ್ಯ ಸರಕಾರ ಅಧಿಕಾರ ನಡೆಸುತ್ತಿದ್ದು ಈ ಬಾರಿ ಆಪರೇಷನ್ ಕಮಲ ನಡೆಸಲು ಹೊರಟರೆ ಇದಕ್ಕೆ ಬಗ್ಗುವ ನಾಯಕರು ಯಾರೂ ಇಲ್ಲ. ನೇರವಾಗಿ ಎದುರಿಸಲು ಸಾಧ್ಯವಾಗದ ಬಿಜೆಪಿಗರು ಆಪರೇಷನ್ ಕಮಲದಂತಹ ವಾಮ ಮಾರ್ಗಗಳನ್ನು ಹುಡುಕುವುದರಲ್ಲಿ ನಿಸ್ಸೀಮರು ಎನ್ನುವುದು ಜಗತ್ತಿಗೆ ತಿಳಿದ ವಿಚಾರವಾಗಿದೆ ಎಂದರು.

ಸ್ವ ಪಕ್ಷದ ಕಾರ್ಯಕರ್ತರಿಗೆ ಧ್ವನಿಯಾಗಬೇಕಾಗಿದ್ದ ಸಂಸದೆ ಕೈಗೆ ಸಿಗದೆ ಇರುವುದರಿಂದ ನೊಂದಿರುವ ಸಹಸ್ರಾರು ಕಾರ್ಯಕರ್ತರು ಪಕ್ಷದ ವರಿಷ್ಠರಿಗೆ ದೂರು ನೀಡಿದ್ದಾರೆ. ಅಲ್ಲದೆ, ಸ್ವ ಪಕ್ಷದ ಕಾರ್ಯಕರ್ತರೇ ಗೋ ಬ್ಯಾಕ್ ಶೋಭಾ ಅಭಿಯಾನ ನಡೆಸುತ್ತಿದ್ದಾರೆ. ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಮುಕ್ತಿ ನೀಡಲು ವಿಫಲರಾಗಿರುವ ಶೋಭಾ ಕರಂದ್ಲಾಜೆ ಅವರ ವಿರುದ್ದ ಇಂತಹ ಅಭಿಯಾನ ನಡೆಯುತ್ತಿರುವುದು ಸರಿಯಾಗಿದೆ. ಮಲ್ಪೆ ರಾಷ್ಟ್ರೀಯ ಹೆದ್ದಾರಿ, ಸಂತೆಕಟ್ಟೆ ಅಂಡರ್ ಪಾಸ್, ಇಂದ್ರಾಳಿ ಸೇತುವೆ ಇಂತಹ ಹತ್ತು ಹಲವು ಸಮಸ್ಯೆಗಳಿಂದ ಜನರನ್ನು ಎದುರಿಸಲು ಸಾಧ್ಯವಾಗದ ಅವರ ಕಾರ್ಯಕರ್ತರು ಗೋ ಬ್ಯಾಕ್ ಚಳುವಳಿ ನಡೆಸುತ್ತಿದ್ದಾರೆ. ಇದನ್ನು ಸರಿ ಮಾಡಬೇಕಾಗಿರುವ ಸಂಸದೆಯವರು ರಾಜ್ಯ ಸರಕಾರದ ವಿರುದ್ದ ಮಾತನಾಡುವ ಯಾವುದೇ ನೈತಿಕ ಹಕ್ಕು ಹೊಂದಿಲ್ಲ ಎಂದು ಗುಡುಗಿದರು.

spot_img

More articles

LEAVE A REPLY

Please enter your comment!
Please enter your name here