Sunday, November 10, 2024

ಉಡುಪಿ: ಫೆ.23ರಿಂದ ‘ಬಿಲ್ಡ್ ಟೆಕ್-2024’ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನ

Must read

ಉಡುಪಿ: ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್, ಉಡುಪಿ ಹಾಗೂ ಯು.ಎಸ್. ಕಮ್ಯೂನಿಕೇಶನ್ಸ್, ಬೆಂಗಳೂರು ಇದರ ಸಹಯೋಗದಲ್ಲಿ ‘ಬಿಲ್ಡ್ ಟೆಕ್-2024’ ಎಂಬ ಶೀರ್ಷಿಕೆಯೊಂದಿಗೆ ಕಟ್ಟಡ ಸಾಮಗ್ರಿಗಳ ವಸ್ತು ಪ್ರದರ್ಶನವನ್ನು ಇದೇ ಫೆ. 23ರಿಂದ ಮತ್ತು 25ರ ವರೆಗೆ ಮೂರು ದಿನಗಳ‌ ಕಾಲ ಉಡುಪಿ ಕುಂಜಿಬೆಟ್ಟುವಿನ ಎಂ.ಜಿ.ಎಂ. ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಅಧ್ಯಕ್ಷ ಪಾಡುರಂಗ ಆಚಾರ್ಯ ಹೇಳಿದರು.

ಉಡುಪಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಉತ್ಪಾದಕರಿಂದ ಕಟ್ಟಡ ಸಾಮಗ್ರಿಗಳು, ಇಂಟೀರಿಯರ್ಸ್, ಎಕ್ಸೆರಿಯರ್ಸ್ ಉತ್ಪಾದನೆಗಳು ನೇರವಾಗಿ ಗ್ರಾಹಕರಿಗೆ ತಲುಪುವಂತೆ ಒಂದೇ ಸೂರಿನಡಿಯಲ್ಲಿ ಬರುವಂತೆ ವ್ಯವಸ್ಥೆ ಮಾಡಲಾಗಿದೆ. ವಿವಿಧ ಕಂಪನಿಗಳ ಡೋರ್ಸ್, ವಿಂಡೋಸ್ ಬಾತ್ ರೂಮ್ ಫಿಟ್ಟಿಂಗ್ಸ್, ಗ್ಲಾಸ್ ಅಂಡ್ ಗ್ಲಾಸ್ ಫಿಟ್ಟಿಂಗ್ಸ್, ಟೈಲ್ಸ್, ಸೆನಿಟರಿ ಅಂಡ್ ಪ್ಲಂಬಿಂಗ್, ಸ್ವಿಚ್ಚಸ್ ಅಂಡ್ ಎಲೆಕ್ಟಿಕಲ್ ಫಿಟ್ಟಿಂಗ್ಸ್, ಕನ್ಸ್‌ಟ್ರಕ್ಷನ್ ಟೆಕ್ನಾಲಜೀಸ್, ಸೋಲಾರ್ ಪ್ರೋಡಕ್ಟ್, ಫ್ಲೋರಿಂಗ್ ಮತ್ತು ರೂಫಿಂಗ್‌ಗೆ ಸಂಬಂಧಿಸಿದ ಉತ್ಪನ್ನಗಳು, ಪೇಂಟ್ಸ್ ಮತ್ತು ವಾಟರ್ ಪ್ರೊಫ್ ಕೆಮಿಕಲ್ಸ್, ಸ್ಪೀಲ್, ಸಿಮೆಂಟ್, ಫೈವುಡ್, ಸೇಫ್ಟಿ ಮತ್ತು ಮೆಶಿನರಿ ಎಕ್ಯೂಪ್‌ಮೆಂಟ್ಸ್, ಎಲಿವೇಟರ್ಸ್ ಮುಂತಾದ ಕಂಪನಿಗಳು ಈ ಪ್ರದರ್ಶನದಲ್ಲಿ ಭಾಗವಹಿಸುತ್ತಿವೆ.

ಹೋಂ ಲೋನ್ ಗಳ ಬಗ್ಗೆ ನಿಖರವಾದ ಮಾಹಿತಿ ನೀಡಲು ಪ್ರತಿಷ್ಠಿತ ಬ್ಯಾಂಕ್‌ಗಳು ಕೂಡ ಇಲ್ಲಿ ಪಾಲ್ಗೊಳ್ಳುತ್ತಿವೆ. ಇನ್ನು ಇಂಟೀರಿಯರ್ ಸಲುವಾಗಿ ವಿವಿಧ ಸೋಫಾ ಮತ್ತು ಡೈನಿಂಗ್ ಟೇಬಲ್ ಕಿಚನ್ ಸೆಟ್ ಮುಂತಾದವುಗಳನ್ನು ನೋಡಬಹುದಾಗಿದೆ. ಇನ್ನು ಎಕ್ಸರಿಯರ್ಸ್‌ ಗಾಗಿ ಬೇರೆ ಬೇರೆ ಉತ್ಪನ್ನಗಳು ಕೂಡ ಇಲ್ಲಿ ಲಭ್ಯವಿರುತ್ತವೆ. ಇದಲ್ಲದೆ, ಉಡುಪಿ ಜಿಲ್ಲೆಗೆ ಸಂಬಂಧಿಸಿದ ಎಲ್ಲಾ ತಾಲೂಕುಗಳಿಂದ ಇಂಜಿನಿಯರ್ಸ್‌ಗಳು. ಕಾಂಟ್ರಾಕ್ಟರ್ಸ್, ಬಿಲ್ಡರ್ಸ್ ಅಂಡ್ ಡೆವಲಪರ್ಸ್, ಕಟ್ಟಡ ಸಾಮಗ್ರಿಗಳ ಉತ್ಪಾದಕರು ಮತ್ತು ಮಾರಾಟಗಾರರು, ಮೇಸನ್ಸ್, ಪೇಂಟರ್ಸ್, ಪ್ಲಂಬರ್ಸ್, ಟೈಲ್ಸ್ ಫಿಟ್ಟರ್ಸ್, ಬಾರ್ ಬೆಂಡೆರ್ಸ್ ಅಂಡ್ ಸೆಂಟ್ರಿಂಗ್ ಕಾರ್ಪೆಟರ್ಸ್ ಕೂಡ ಈ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಮತ್ತು ಸುತ್ತ ಮುತ್ತಲಿನ ಜಿಲ್ಲೆಗಳಿಂದ ಹೆಸರಾಂತ ಆರ್ಕಿಟೆಕ್ಟ್ ಮತ್ತು ಇಂಜಿನಿಯರ್ಸ್‌ಗಳನ್ನು ಕೂಡ ಈ ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ. ಶಾಂತ ಎಲೆಕ್ಟಿಕಲ್ಸ್ ಇಶಿಜೀನಿಯರ್ಸ್ ಪ್ರೈವೇಟ್ ಲಿಮಿಟೆಡ್ ಕಾರ್ಯಕ್ರಮದ ಮುಖ್ಯ ಪ್ರಾಯೋಜಕತ್ವರಾಗಿದ್ದಾರೆ.

ನಗರದ ಇಂಜಿನಿಯರ್ಸ್‌ ಮತ್ತು ಆರ್ಕಿಟೆಕ್ಸ್‌ಗಳು ಮನೆ ಕಟ್ಟಿಸಬೇಕೆನ್ನುವರು. ಈಗಾಗಲೇ ಕಟ್ಟಿಸಲಿಕ್ಕೆ ಪ್ರಾರಂಭಿಸಿದವರು ಮುಕ್ತಾಯದ ಹಂತದಲ್ಲಿರುವವರು ಇವತ್ತು ಪ್ರದರ್ಶಕ್ಕೆ ಭೇಟಿ ನೀಡಿ ಸಮಗ್ರ ಮಾಹಿತಿಯನ್ನು ಪಡೆದುಕೊಳ್ಳಬಹುದಾಗಿದೆ. ಸಾರ್ವಜನಿಕರಿಗೆ ಉಚಿತವಾಗಿ ಪ್ರವೇಶ ಇರುತ್ತದೆ, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವುದರ ಜೊತೆ ಸದೃಢ ಸುಂದರ ಮನೆ ಕಟ್ಟುವ ಕನಸನ್ನು ನನಸಾಗಿಸಿ ಕೊಳ್ಳಬಹುದು. ಫೆ.23ರಂದು ಮಧ್ಯಾಹ್ನ 12 ಗಂಟೆಗೆ ಕ್ರಡೈ ಉಡುಪಿ ಇದರ ಅಧ್ಯಕ್ಷ ಮನೋಹರ್ ಎಸ್. ಶೆಟ್ಟಿ ಅವರು ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಎ.ಸಿ.ಸಿ.ಇ.ಎ.ಯ ಅಧ್ಯಕ್ಷ ಪಾಂಡುರಂಗ ಆಚಾರ್ ಕೆ. ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ಎ.ಸಿ.ಸಿ.ಇ.ಎ.ಯ ಗೌರವ ಅಧ್ಯಕ್ಷ ನಾಗೇಶ್ ಹೆಗ್ಡೆ, ಮಾಂಡವಿ ಬಿಲ್ಡರ್ಸ್ & ಡೆವಲಪರ್ಸ್ ನ ಜೆರ್ರಿ ವಿನ್ಸೆಂಟ್ ಡಯಾಸ್, ಉಜ್ವಲ್ ಡೆವಲಪರ್‌ನ ಪುರುಷೋತ್ತಮ್ ಪಿ. ಶೆಟ್ಟಿ, ಎ.ಸಿ.ಸಿ.ಇ.ಎ.ಯ ಮಾಜಿ ಅಧ್ಯಕ್ಷ ಗೋಪಾಲ್ ಎಂ. ಭಟ್ ಹಾಗೂ ಶಾಂತ ಎಲೆಕ್ಟಿಕಲ್ಸ್ ನ ಶ್ರೀಪತಿ ಭಟ್ ಭಾಗವಹಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಅಸೋಸಿಯೇಶನ್ ಆಫ್ ಕನ್ಸಲ್ಟಿಂಗ್ ಸಿವಿಲ್ ಇಂಜಿನಿಯರ್ಸ್ ಮತ್ತು ಆರ್ಕಿಟೆಕ್ಟ್ಸ್ ಮಾಜಿ ಅಧ್ಯಕ್ಷ ಎಂ. ಗೋಪಾಲ್ ಭಟ್, ಕಾರ್ಯದರ್ಶಿ ಯೋಗೀಶ್ ಚಂದ್ರ, ಯು.ಎಸ್. ಕಮ್ಯೂನಿಕೇಶನ್ಸ್ ನ ಉಮಾಪತಿ, ಶಾಂತ ಎಲೆಕ್ಟಿಕಲ್ಸ್ ನ ಶ್ರೀಪತಿ ಭಟ್ ಉಪಸ್ಥಿತರಿದ್ದರು.

spot_img

More articles

LEAVE A REPLY

Please enter your comment!
Please enter your name here