ಮಣಿಪಾಲ: ಆನ್ ಲೈನ್ ನಲ್ಲಿ ಉದ್ಯೋಗ ಹುಡುಕಲು ಹೋಗಿ ವಂಚನೆಯ ಜಾಲಕ್ಕೆ ಸಿಲುಕಿದ ಮಹಿಳೆಯೊಬ್ಬರು ಲಕ್ಷಾಂತರ ರೂ. ಕಳೆದುಕೊಂಡ ಘಟನೆ ಮಣಿಪಾಲದಲ್ಲಿ ನಡೆದಿದೆ.
ಮಣಿಪಾಲದ ವಿದ್ಯಾರತ್ನ ನಗರದ ಜಾಸ್ಮಿ ಟಿ.ಕೆ.(34) ಎಂಬವರೇ ವಂಚನೆಗೆ ಒಳಗಾದ ಮಹಿಳೆ. ಇವರು ಸಾಮಾಜಿಕ ಜಾಲತಾಣದಲ್ಲಿ ಬಂದ ಆನ್‌ಲೈನ್ ಜಾಬ್ ಬಗ್ಗೆ ಒಪ್ಪಿಕೊಂಡಿದ್ದು, ಅದರಂತೆ ಆ್ಯಪ್ ಮೂಲಕ ಬಂದ ಲಿಂಕ್‌ನಲ್ಲಿ ಟಾಸ್ಕ್ ನೀಡಲಾಗಿತ್ತು. ಜ.8ರಂದು ಟೆಲಿಗ್ರಾಮ್ ಆ್ಯಪ್ ಮೂಲಕ ಸಂಪರ್ಕಿಸಿ ಟ್ರೇಡಿಂಗ್ ವಿವರ ನೀಡಿದ್ದು, ಜಾಸ್ಮಿ ಜ.11ರಂದು ಒಟ್ಟು 1,88,000ರೂ. ಹಣವನ್ನು ಮಹೇಶ್ ಎಂಬಾತನ ಬ್ಯಾಂಕ್ ಖಾತೆಗೆ ಜಮಾವಣೆ ಮಾಡಿದ್ದರು.
ಆರೋಪಿಯು ನಕಲಿ ಆ್ಯಪ್ ಮೂಲಕ ಜಾಸ್ಮಿ ಅವರಿಂದ ಹಣ ವರ್ಗಾವಣೆ ಮಾಡಿಸಿ, ಹಣ ವಾಪಾಸು ನೀಡದೇ ಮೋಸ ಮಾಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.