Friday, June 14, 2024

ಪುತ್ತಿಗೆ ಪರ್ಯಾಯ: ಹೊರೆಕಾಣಿಕೆ ಸಮಾಲೋಚನಾ ಸಭೆ

Must read

ಉಡುಪಿ: ಪುತ್ತಿಗೆ ಪರ್ಯಾಯ ಮಹೋತ್ಸವಕ್ಕೆ ಕನ್ನರ್ಪಾಡಿ ಜಯದುರ್ಗಾಪರಮೇಶ್ವರಿ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಗ್ರಾಮದ ಭಕ್ತರಿಂದ ಹೊರೆಕಾಣಿಕೆ ಸಮರ್ಪಿಸುವ ಬಗ್ಗೆ ಸಮಾಲೋಚನಾ ಸಭೆಯನ್ನು ನಡೆಸಲಾಯಿತು.


ಪರ್ಯಾಯ ಹೊರೆಕಾಣಿಕೆಯ ಸಂಚಾಲಕ ಸುಪ್ರಸಾದ ಶೆಟ್ಟಿ ಮಾತನಾಡಿ, ಈ ಬಾರಿಯ ವಿಶ್ವ ಪರ್ಯಾಯಕ್ಕೆ ಲಕ್ಷಾಂತರ ಭಕ್ತರು ಉಡುಪಿಗೆ ಆಗಮಿಸಲಿದ್ದು, ಅನ್ನದಾನಕ್ಕಾಗಿ ಬ್ರಹತ್ ಹೊರೆಕಾಣಿಕೆ ವ್ಯವಸ್ಥೆ ಆಯೋಜಿಸಬೇಕೆಂದು ಮನವಿ‌ ಮಾಡಿದರು.


ಗಂಗಾಧರ್ ರಾವ್ ಮಾತನಾಡಿ, ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದ ಅವರು, ಹೊರೆಕಾಣಿಕೆಯ ಮೆರವಣಿಗೆಯು ವ್ಯವಸ್ಥಿತೆಯಿಂದ ಸಾಗಬೇಕೆಂದು ವಿನಂತಿಸಿದರು. ಜಯಪ್ರಕಾಶ ಕೆದ್ಲಾಯ ಅವರು, ಊರ ಸುತ್ತಮುತ್ತಲಿನ ಜನರ ಸಹಕಾರ ಕೋರಿದರು. ದೇವಸ್ಥಾನದ ಮುಖ್ಯಸ್ಥರಾದ ರಾಘವೇಂದ್ರ ಭಟ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಸ್ವಾಗತ ಸಮಿತಿಯ ರವೀಂದ್ರ ಆಚಾರ್ಯ, ರಘುಪತಿ ರಾವ್ ಹಾಗೂ ಊರ ಮುಖ್ಯಸ್ಥರು ಹಾಜರಿದ್ದರು.

spot_img

More articles

LEAVE A REPLY

Please enter your comment!
Please enter your name here