ಉಡುಪಿ: ನಿಟ್ಟೂರು ರಾಷ್ಟ್ರೀಯ ಹೆದ್ದಾರಿಯ ಬಳಿ ಬಸ್ಸು ನಿಲ್ದಾಣವೊಂದು ಕುಡುಕರ ಅಡ್ಡೆಯಾಗಿದ್ದು, ಪೊದೆಯಿಂದ ಆವರಿಸಿಕೊಂಡು ಭೀತಿ ಹುಟ್ಟಿಸುವ ಸ್ಥಿತಿಯಲ್ಲಿದೆ.
ಪ್ರಯಾಣಿಕರ ತಂಗುದಾಣವು ಮೂಲ ಸ್ಥಿತಿಯನ್ನು ಕಳೆದುಕೊಂಡು ಶಿಥಿಲಾವಸ್ಥೆಗೆ ತಲುಪಿದೆ. ತಕ್ಷಣ ನಗರಸಭೆ ಈ ಬಸ್ಸು ನಿಲ್ದಾಣವನ್ನು ಪುರ್ನನಿರ್ಮಾಣ ಮಾಡಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರುವರು ಆಗ್ರಹಪಡಿಸಿದ್ದಾರೆ.
ಬಳಕೆಗೆ ಯೋಗ್ಯವಲ್ಲದ ಸ್ಥಿತಿಯಲ್ಲಿ ನಿಲ್ದಾಣವಿದೆ. ಸಾರ್ವಜನಿಕರು ಬಿಸಿಲಿನಲ್ಲಿಯೇ ನಿಲ್ಲಬೇಕಾದ ಪರಿಸ್ಥಿತಿ ಎದುರಾಗಿದೆ. ಕುಡುಕರ ಹಾವಳಿಯಿಂದ ಇಲ್ಲಿ ಭೀತಿಯ ವಾತವರಣ ಸೃಷ್ಟಿಯಾಗಿದೆ. ಸಮೀಪದಲ್ಲೇ ಸಖಿ ಓನ್ ಸೆಂಟರ್, ರಾಜ್ಯ ಮಹಿಳಾ ನಿಲಯ ಕೂಡ ಇದೆ. ಹೀಗಾಗಿ ಸಂಬಂಧಪಟ್ಟವರು ಈ ಬಗ್ಗೆ ಕೂಡಲೇ ಕ್ರಮವಹಿಸಬೇಕೆಂದು ಅವರು ಒತ್ತಾಯಿಸಿದ್ದಾರೆ