ಉಡುಪಿ: ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು ಇದರ ನೂತನ ಪದಾಧಿಕಾರಿಗಳ ಆಯ್ಕೆಯ ಸಭೆಯು ಉಡುಪಿ ತಾಲೂಕು ಅಧ್ಯಕ್ಷ ಬಾಲಕೃಷ್ಣ ಶೆಟ್ಟಿ ಪೇತ್ರಿ ಇವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಕಛೇರಿ ಅಂಬಲಪಾಡಿಯ ಪ್ರಗತಿ ಸೌಧದಲ್ಲಿ ನಡೆಯಿತು.
ಉಡುಪಿ ತಾಲೂಕು ಭಜನಾ ಪರಿಷತ್ ನ ಮುಂದಿನ 2 ವರ್ಷಗಳ ಅವಧಿಗೆ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು. 2023-25ನೇ ಸಾಲಿನ ನೂತನ ಅಧ್ಯಕ್ಷರಾಗಿ ವಿಜಯ ಶೆಟ್ಟಿ ಕೊಂಡಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಶಿವಕುಮಾರ್ ಅಂಬಲಪಾಡಿ ಸರ್ವಾನುಮತದಿಂದ ಆಯ್ಕೆಯಾದರು.
ಉಪಾಧ್ಯಕ್ಷರಾಗಿ ವಜ್ರಾಕ್ಷಿ ಪಿ. ದಾಸ್ ಕಡಿಯಾಳಿ, ಸುಮಿತ್ರಾ ನಾಯ್ಕ್ ಪೆರಂಪಳ್ಳಿ, ಜತೆ ಕಾರ್ಯದರ್ಶಿಯಾಗಿ ಸತೀಶ್ ಕುಮಾರ್ ಕೇದಾರ್, ಕೋಶಾಧಿಕಾರಿಯಾಗಿ ಪೂರ್ಣಿಮಾ ಪೆರ್ಡೂರು ಹಾಗೂ ವಲಯ ಸಂಯೋಜಕರಾಗಿ ರಾಧಾಕೃಷ್ಣ ಮೆಂಡನ್ ಮಲ್ಪೆ, ಯಶೋಧಾ ರಘುರಾಮ್ ಹೇರೂರು, ನೇತ್ರಾವತಿ ಅಂಬಾಗಿಲು ಹಾಗೂ ಸಹ ಸಂಯೋಜಕರಾಗಿ ಭಾಸ್ಕರ್ ಆಚಾರ್ಯ ಕೇದಾರ್, ಶಾಂಭವಿ ಕುಲಾಲ್ ಪೆರ್ಡೂರು, ಗೀತಾ ಕೃಷ್ಣರಾಜ್ ಆಯ್ಕೆಯಾಗಿದ್ದಾರೆ.
ಉಡುಪಿ ತಾಲೂಕು ಯೋಜನಾಧಿಕಾರಿ ರಾಮ ಎಮ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಯೋಜನೆಯ ಅಂಬಲಪಾಡಿ ವಲಯ ಸೇವಾ ಪ್ರತಿನಿಧಿಗಳಾದ ಗೀತಾ ಪಾಲನ್ ಗತ ಸಭೆಯ ವರದಿಯನ್ನು ಮಂಡಿಸಿ, ಕಾರ್ಯಕ್ರಮ ನಿರೂಪಿಸಿ, ಮಮತಾ ವಂದಿಸಿದರು.