Friday, September 20, 2024

ಉಡುಪಿ: ಗ್ಯಾಸ್ ಸಂಪರ್ಕಕ್ಕೆ ಆಧಾರ್ ದೃಢೀಕರಣ; ಇಲಾಖೆಯಿಂದ ಸ್ಪಷ್ಟನೆ

Must read

ಉಡುಪಿ: ಡಿ.31ರೊಳಗೆ ಅನಿಲ ಸಂಪರ್ಕ ಇದ್ದವರು ಆಧಾರ ಸಂಖ್ಯೆಯೊಂದಿಗೆ ಕೆವೈಸಿ ಮಾಡಿಸಬೇಕು. ಇದರಿಂದ ಜ.1ರಿಂದ ಸಬ್ಸಿಡಿ (903ರಿಂದ 500ಕ್ಕೆ) ಸಿಗುತ್ತದೆ. ಇಲ್ಲದಿದ್ದರೆ ಸಬ್ಸಿಡಿ ರಹಿತವಾಗಿ ಸಂಪರ್ಕ ಕಮರ್ಷಿಯಲ್ ಆಗಿ ಮಾರ್ಪಟ್ಟು ಸಿಲಿಂಡರ್‌ಗೆ 1400ರೂ. ನೀಡ ಬೇಕಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಈ ಸಂದೇಶದಿಂದ ಗ್ಯಾಸ್ ಬಳಕೆದಾರರು ಗೊಂದಲಕ್ಕೀಡಾಗಿದ್ದಾರೆ.


ಜನರು ಗ್ಯಾಸ್ ಪಡೆದ ಎಜೆನ್ಸಿಗೆ ಆಧಾರ್ ಕಾರ್ಡ್, ಬ್ಯಾಂಕ್ ಪಾಸ್ ಪುಸ್ತಕದೊಂದಿಗೆ ತೆರಳಿ ಕೈವೈಸಿ ಮಾಡಿಸಲು ಧಾವಿಸಿದ್ದು, ಅಂಗಡಿ ಮುಂದೆ ನೂಕುನುಗ್ಗಲು ಉಂಟಾಗುತ್ತಿದೆ.
ವೈರಲ್ ಸಂದೇಶದ ಕುರಿತು ಉಜ್ವಲ ಯೋಜನೆಯ ನೋಡಲ್ ಅಧಿಕಾರಿ ರಾಹುಲ್ ಸ್ಪಷ್ಟನೆ ನೀಡಿದ್ದು, ಅದೊಂದು ಫೇಕ್ ಸುದ್ದಿ. ಕೆವೈಸಿ ಮಾಡಿರುವವರಿಗೆ ಸಬ್ಸಿಡಿ ಮತ್ತೆ ನೀಡುವ ಹಾಗೂ ಮಾಡಿಸದಿದ್ದವರಿಗೆ ಸಿಲಿಂಡರ್ ಒಂದರ ದರ ಹೆಚ್ಚಾಗುವ ಸುದ್ದಿ ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದರು.


ಕೇಂದ್ರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಸಚಿವಾಲಯ ದಿಂದ ಬಂದಿರುವ ನೋಟಿಫಿಕೇಷನ್‌ನಲ್ಲಿ ಕೇಂದ್ರ ಸರಕಾರದ ಉಜ್ವಲ (ಪಿಎಂಯುವೈ) ಹಾಗೂ ಪಹಲ್ (ಪಿಎಎಚ್‌ಎಎಲ್) ಯೋಜನೆಯ ಫಲಾನುಭವಿಗಳ ಗ್ಯಾಸ್ ಸಂಪರ್ಕವನ್ನು ಆಧಾರ್ ದೃಢೀಕರಣದೊಂದಿಗೆ ಆದ್ಯತೆಯ ನೆಲೆಯಲ್ಲಿ ಕೆವೈಸಿ ಮಾಡುವ ಸೂಚನೆ ಮಾತ್ರ ಇದ್ದು ಬೇರೆ ಯಾವುದೇ ಪ್ರಸ್ತಾಪವೂ ಇರುವುದಿಲ್ಲ ಎಂದಿದ್ದಾರೆ.
ಗ್ಯಾಸ್ ಸಂಪರ್ಕ ಹೊಂದಿರುವವರೆಲ್ಲರೂ ಕೈವೈಸಿ ಮಾಡಿಸಬೇಕು. ಆದರೆ ಅವರಿಗೆ ಯಾವುದೇ ಸಮಯವನ್ನು ನಿಗದಿ ಪಡಿಸಿಲ್ಲ. ಕೊನೆಯ ದಿನವನ್ನೂ ತಿಳಿಸಿಲ್ಲ. ಸಬ್ಸಿಡಿ ಮತ್ತೆ ನೀಡುವ ಪ್ರಸ್ತಾಪವಂತೂ ಇಲ್ಲವೇ ಇಲ್ಲ. ಈಗ ಉಜ್ವಲ ಫಲಾನು ಭವಿಗಳನ್ನು ಹೊರತು ಪಡಿಸಿ ಬೇರೆ ಯಾರಿಗೂ ಅನಿಲದ ಸಿಲಿಂಡರ್‌ನಲ್ಲಿ ಸಬ್ಸಿಡಿ ಸಿಗುತ್ತಿಲ್ಲ. ಹೀಗಾಗಿ ಬಳಕೆದಾರರು ಗೊಂದಲ ಪಡುವ ಅಗತ್ಯ ಇಲ್ಲ ಎಂದರು.

spot_img

More articles

LEAVE A REPLY

Please enter your comment!
Please enter your name here