Friday, September 20, 2024

ಡಿ. 29-30 ಉಡುಪಿಯಲ್ಲಿ ಆಟೋ ಎಕ್ಸ್ ಪೋ-2023

Must read

ಉಡುಪಿ: ಉಡುಪಿ ಜಿಲ್ಲಾ ಆಟೋ ಮೊಬೈಲ್ ಡೀಲರ್ಸ್ ಅಸೋಸಿಯೇಶನ್ ಮತ್ತು ಉಡುಪಿ ಚೇಂಬರ್ಸ್ ಆಫ್ ಕಾಮರ್ಸ್ ಆ್ಯಂಡ್ ಇಂಡಸ್ಟ್ರೀಸ್ ವತಿಯಿಂದ ಡಿ. 29 ಮತ್ತು 30 ರಂದು ಉಡುಪಿಯ ಎಂಜಿಎಂ ಕಾಲೇಜಿನ ಕ್ರೀಡಾಂಗಣದಲ್ಲಿ ಆಟೋ ಎಕ್ಸ್‌ಪೋ 2023 ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಕಾರ್ಯದರ್ಶಿ ಕಾಶಿನಾಥ ನಾಯಕ್ ತಿಳಿಸಿದ್ದಾರೆ.


ಈ ಬಗ್ಗೆ ಉಡುಪಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ಎಕ್ಸ್‌ಪೋದಲ್ಲಿ ವಿವಿಧ ಕಂಪೆನಿಗಳ ದ್ವಿಚಕ್ರ, ತ್ರಿಚಕ್ರ, ಕಾರು, ಜೀಪು, ಟೆಂಪೋ, ಬಸ್, ಲಾರಿ, ಎಲ್ಲ ಮಾದರಿಯ ಎಲೆಕ್ನಿಕ್ ಮತ್ತು ಸಿಎನ್‌ಜಿ ವಾಹನಗಳ ಪ್ರದರ್ಶನ ನಡೆಯಲಿದೆ. ಸ್ಥಳದಲ್ಲೇ ವಾಹನಗಳ ಬುಕ್ಕಿಂಗ್ ಮಾಡಲು ಅವಕಾಶವಿದ್ದು, ಸ್ಥಳದಲ್ಲೇ ಬುಕಿಂಗ್ ಮಾಡಿದವರಿಗೆ ಕಂಪೆನಿ ವತಿಯಂದ ವಿಶೇಷ ಆಫರ್ ದೊರೆಯಲಿದೆ. ಬ್ಯಾಂಕ್ ಸಾಲ ಸೌಲಭ್ಯವನ್ನೂ ಕಲ್ಪಿಸಲಾಗುವುದು ಎಂದರು.


ಪ್ರತಿಷ್ಠಿತ ಕಂಪೆನಿ ಭಾಗಿ:
ಟಾಟಾ ಎಕ್ಸ್ ಪೋ ದಲ್ಲಿ ಮುಖ್ಯವಾಗಿ ಟಾಟಾ ಎಚ್‌ಸಿವಿ, ಲೈಲ್ಯಾಂಡ್, ಈಷರ್, ಭಾರತ್ ಬೆಂಜ್, ಹುಂಡೈ, ಮಾರುತಿ ಸುಝುಕಿ, ವೋಕ್ಸ್‌ವಾಗನ್, ಜೀಪ್, ಮಹೀಂದ್ರ, ಕಿಯಾ, ಎಂಜಿ, ಟೊಯೋಟಾ, ಸ್ಕೋಡಾ, ಬೆಂಝ್, ಬಿಎಂಡಬ್ಲ್ಯು, ಆಡಿ, ಸಿಟ್ರಾನ್, ಟಾಟಾ ಕಾರು, ಹೋಂಡಾ ಕಂಪೆನಿಗಳ ವಾಹನಗಳ ಪ್ರದರ್ಶನ ಇರಲಿದೆ.

ದ್ವಿಚಕ್ರ ವಾಹನಗಳು:

ಟಿವಿಎಸ್, ಸುಝುಕಿ, ಹಿರೋ, ಹೋಂಡಾ, ಬಜಾಜ್, ಯಮಹಾ, ಎನ್‌ಫೀಲ್ಡ್, ಎಲೆಕ್ನಿಕ್ ವಾಹನಗಳಾದ ಓಲಾ, ಅರ್ಥ, ಪ್ಯೂರ್, ತ್ರಿಚಕ್ರ ವಾಹನಗಳಾದ ಆಪೆ, ಬಜಾಜ್, ಟಿವಿಎಸ್ ಕಂಪೆನಿಗಳ ವಾಹನಗಳು ಪ್ರದರ್ಶನ ಮತ್ತು ಮಾರಾಟ ನಡೆಯಲಿದೆ.

ಮಾಹಿತಿ ಕಾರ್ಯಾಗಾರ

ಬಿಎಸ್ 6 ವಾಹನಗಳ ಬಗ್ಗೆ ಕಂಪೆನಿಯ ತಜ್ಞರಿಂದ ಮಾಹಿತಿ ಕಾರ್ಯಾಗಾರ ನಡೆಯಲಿದೆ. ಇನ್ನು ಎಕ್ಸ್‌ಪೋದಲ್ಲಿ ಭಾಗವಹಿಸುವ ಎಲ್ಲರಿಗೂ ಆಯೋಜಕರ ವತಿಯಿಂದ ಅದೃಷ್ಟ ಕೂಪನ್ ನೀಡಲಾಗುವುದು. ಎರಡೂ ದಿನವೂ ಕೂಪನ್ ನೀಡಲಾಗುತ್ತಿದ್ದು ಡ್ರಾ ವಿಜೇತರಿಗೆ ವಿಶೇಷ ಬಹುಮಾನ ನೀಡಲಾಗುವುದು. ಮೆಕ್ಯಾನಿಕ್ ಬಳಗದವರಿಗೆ ವಿಶೇಷ ಕೂಪನ್ ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ನಿಶಾಂತ್ ಭಟ್, ಪ್ರಕಾಶ್ ಶೆಟ್ಟಿ, ಮ್ಯಾಕ್ಸಿಮ್‌ ಡಿಸೋಜಾ, ವಲೇರಿಯನ್ ಫರ್ನಾಂಡೀಸ್‌ ಉಪಸ್ಥಿತಿತರಿದ್ದರು.

spot_img

More articles

LEAVE A REPLY

Please enter your comment!
Please enter your name here