Friday, November 27, 2026

ಮಲ್ಪೆ ಪಡುಕರೆ: ನವೆಂಬರ್ 28ರಂದು ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್ ಉದ್ಘಾಟನೆ

Must read

ಉಡುಪಿ: ಶ್ಯಾಮಿಲಿ ಸಮೂಹ ಸಂಸ್ಥೆಯ ಸಹಸಂಸ್ಥೆ ಉಡುಪಿಯ ಕೋಸ್ಟಲ್‌ವುಡ್ ರೆಸಾರ್ಟ್‌ನ ಅತ್ಯಾ ಧುನಿಕ ಶೈಲಿಯ ‘ಸಿರೆನಾ ಲಕ್ಷುರಿ ಬೀಚ್ ರೆಸಾರ್ಟ್’ ನ. 28ರಂದು ಉದ್ಘಾಟನೆಗೊಳ್ಳಲಿದೆ.
ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಸಚಿವರಾದ ಕೆ. ಜೆ. ಜಾರ್ಜ್‌, ರಿಜ್ವಾನ್‌ ಅರ್ಷದ್, ಕೆ.ಎಸ್. ಬಸವಂತಪ್ಪ, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಉಪ ಸಭಾಪತಿ ಮಂಕಾಳ ವೈದ್ಯ, ಶಾಸಕರಾದ ಯಶ್‌ಪಾಲ್ ಎ. ಸುವರ್ಣ, ಸುರೇಶ್ ಶೆಟ್ಟಿ ಗುರ್ಮೆ, ವಿಧಾನ ಪರಿಷತ್‌ ಸದಸ್ಯ ಐವನ್ ಡಿ’ಸೋಜಾ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಎಂ. ಗಫೂರ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ, ಎಸ್. ಅಂಗಾರ, ಕೆ. ಜಯಪ್ರಕಾಶ್ ಹೆಗ್ಡೆ, ಪ್ರಮೋದ್ ಮಧ್ವರಾಜ್, ಮಾಜಿ ಶಾಸಕ ಕೆ. ರಘುಪತಿ ಭಟ್ ಸಹಿತ ಪ್ರಮುಖ ಗಣ್ಯರು ಪಾಲ್ಗೊಳ್ಳಲಿರುವರು ಎಂದು ಶ್ಯಾಮಿಲಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ| ಜಿ. ಶಂಕರ್ ತಿಳಿಸಿದ್ದಾರೆ.

ಉದ್ಘಾಟನೆಗೆ ಚಿತ್ರನಟರ ಮೆರುಗು

ಉದ್ಘಾಟನ ಸಮಾರಂಭದಲ್ಲಿ ವಿಶೇಷ ಆಕರ್ಷಣೆಯಾಗಿ ನಟ, ನಿರ್ದೇಶಕ ರೂಪೇಶ್ ಶೆಟ್ಟಿ, ಪ್ರೇಮದ ಊರಲಿ ಸಿನೆಮಾ ಖ್ಯಾತಿಯ ನಾಯಕ ಶ್ರೀರಾಮ್ ಹಾಗೂ ನಾಯಕಿ ತಪಸ್ವಿನಿ ಪೂಣಚ್ಚ ಪಾಲ್ಗೊಳ್ಳಲಿದ್ದಾರೆ.

ಸ್ಪಾ, ಸ್ವಿಮ್ಮಿಂಗ್ ಫೂಲ್, ಜಿಮ್

ಜನರ ಅನುಕೂಲಕ್ಕೆ ತಕ್ಕಂತೆ ಸ್ಟೈಸ್‌ವೇವ್ ಲಾಂಜ್ ಫ್ಯಾಮಿಲಿ ರೆಸ್ಟೋರೆಂಟ್ ಮತ್ತು ಮಲ್ಟಿಕ್ಯುಸಿನ್ ಬಾರ್ ಮತ್ತು ವೆಜ್ ರೆಸ್ಟೋರೆಂಟ್, ಆಕರ್ಷಕ ಕೋಸ್ಟಗ್ರಾಂಡ್ ಕಾಫಿ ಶಾಪ್, 400ಕ್ಕೂ ಅಧಿಕ ಕಾರುಗಳು / ದ್ವಿಚಕ್ರ ವಾಹನಗಳಿಗಾಗಿ ವಿಶಾಲವಾದ ಪಾರ್ಕಿಂಗ್ ವ್ಯವಸ್ಥೆ, ಸ್ಪಾ, ಸ್ವಿಮ್ಮಿಂಗ್ ಫೂಲ್, ಜಿಮ್ ಮತ್ತು ಮಕ್ಕಳ ಆಟದ ಪಾರ್ಕ್‌ನ ವ್ಯವಸ್ಥೆ, ಕಾರ್ಪೋರೇಟ್ ಸಂಸ್ಥೆಗಳ ಸಭೆ, ಸಮಾರಂಭಗಳಿಗೆ ಅನುಕೂಲವಾಗುವಂತಹ ಬೋರ್ಡ್ ರೂಮ್/ಕಾನ್ಸರೆನ್ಸ್ ಹಾಲ್, ಸಸ್ಯಾಹಾರ ಮತ್ತು ಮಾಂಸಾಹಾರಗಳಿಗೆ ವಿಶಾಲವಾದ ಪ್ರತ್ಯೇಕ ಅಡುಗೆ ಕೋಣೆಯ ವ್ಯವಸ್ಥೆ ಇದೆ.

ಕೈಗೆಟಕುವ ದರದಲ್ಲಿ ಸೌಲಭ್ಯ

ಸಂಪೂರ್ಣ ಹವಾನಿಯಂತ್ರಿತ, 400ಕ್ಕೂ ಮಿಕ್ಕಿ ಜನರು ಆಸೀನರಾಗುವುದಕ್ಕೆ ಬೇಕಾದ ವ್ಯವಸ್ಥೆಯುಳ್ಳ ಆರೆಲಿಯಾ ಬ್ಯಾಂಕ್ವೆಟ್‌ ಹಾಲ್‌, ಸಭಾಂಗಣದ ಸನಿಹದಲ್ಲೇ ಅನುಗ್ರಹದಾತ ಪ್ರಸನ್ನ ಗಣಪತಿ ಮಂದಿರ, ಮೆಹೆಂದಿ, ಹಳದಿ, ಡೆಸ್ಟಿನೇಶನ್ ಮ್ಯಾರೇಜ್, ಮ್ಯಾರೇಜ್ ರಿಸೆಪ್ಯನ್ ಸಹಿತ ಇನ್ನಿತರ ಶುಭ ಸಮಾರಂಭಗಳಿಗೆ ಅನುಕೂಲವಾಗುವ ಆಕರ್ಷಕ, ಹಚ್ಚ ಹಸುರಿನ ಸಿರೆನಾ ಗ್ರೀನ್ಸ್ ಓಪನ್ ಗಾರ್ಡನ್, ಸುಸಜ್ಜಿತವಾದ ಸುಮಾರು 55 ಹವಾನಿಯಂತ್ರಿತ ಡಿಲಕ್ಸ್ ರೂಮ್‌ಗಳನ್ನು ಹೊಂದಿದೆ. ಕೈಗೆಟಕುವ ದರದಲ್ಲಿ ಸಕಲ ಸೌಲಭ್ಯಗಳು ದೊರಕಲಿವೆ.
ಡಾ| ಜಿ. ಶಂಕರ್, ಆಡಳಿತ ನಿರ್ದೇಶಕರು, ಶ್ಯಾಮಿಲಿ ಸಮೂಹ ಸಂಸ್ಥೆ

spot_img

More articles

LEAVE A REPLY

Please enter your comment!
Please enter your name here