Saturday, November 7, 2026

ಅಶಕ್ತ ಕುಟುಂಬಗಳ ಬಾಳಲ್ಲಿ ಬೆಳಕಾದ ಬ್ರಹ್ಮಾವರ ಬಿಲ್ಲವ ಯುವ ವೇದಿಕೆ

Must read

ಉಡುಪಿ: ದೀಪಾವಳಿ ಎಂದರೆ ಕೇವಲ ದೀಪಗಳನ್ನು ಬೆಳಗಿಸುವ ಹಬ್ಬವಲ್ಲ, ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕನ್ನು ಮೂಡಿಸುವ ಹಬ್ಬ ಎಂಬ ಆಶಯದೊಂದಿಗೆ ಬ್ರಹ್ಮಾವರ ಬಿಲ್ಲವ ಸಂಘದ ಬಿಲ್ಲವ ಯುವ ವೇದಿಕೆ, ಬ್ರಹ್ಮಾವರ ವತಿಯಿಂದ ಶನಿವಾರ ಬ್ರಹ್ಮಾವರದ ನಾರಾಯಣ ಗುರು ಸಭಾ ಭವನದಲ್ಲಿ “ಅರಿವಿನ ಗುರು – ಗುರುವಿನ ಬೆಳಕು” ಎಂಬ ಶೀರ್ಷಿಕೆಯಡಿ ವಿಶೇಷ ದೀಪಾವಳಿ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾನತೆ, ಮಾನವೀಯತೆ ಮತ್ತು ಸಹೋದರತ್ವದ ತತ್ವಾದರ್ಶಗಳನ್ನು ಸ್ಮರಿಸುತ್ತಾ, ಆರ್ಥಿಕವಾಗಿ ಹಿಂದುಳಿದ ವಿಧವೆಯರ ಕುಟುಂಬಗಳೊಂದಿಗೆ ದೀಪಾವಳಿಯ ಸಂತೋಷವನ್ನು ಹಂಚಿಕೊಳ್ಳುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಮೂಲಕ ಆಯ್ದ ಅಶಕ್ತ ಕುಟುಂಬಗಳಿಗೆ ದಿನಬಳಕೆಯ ಅಗತ್ಯ ವಸ್ತುಗಳು, ಹೊಸ ಬಟ್ಟೆಗಳು, ಪಟಾಕಿ ಹಾಗೂ ದೀಪಾವಳಿ ಉಡುಗೊರೆಗಳನ್ನು ವಿತರಿಸಿ ಹಬ್ಬದ ಸಂಭ್ರಮವನ್ನು ಹಂಚಿಕೊಳ್ಳಲಾಯಿತು. ಉಡುಗೊರೆಗಳ ಜೊತೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ನೀಡಿ, ಮನೆಯಲ್ಲಿ ಅವರ ಭಾವಚಿತ್ರಕ್ಕೆ ಪೂಜೆ ಮಾಡಬೇಕೆಂಬ ಸಂಕಲ್ಪದಲ್ಲಿ, ಗುರುಗಳ ಸಂದೇಶವನ್ನು ಮನೆಮನೆಗೆ ತಲುಪಿಸುವ ಪ್ರಯತ್ನ ಮಾಡಲಾಯಿತು.

ಈ ಸಂದರ್ಭದಲ್ಲಿ ಉಡುಪಿ ಚಿಕ್ಕಮಗಳೂರು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಮಾತನಾಡಿ “ನಮ್ಮ ಮನೆಯ ಅಂಗಳದಲ್ಲಿ ದೀಪ ಬೆಳಗಿಸುವುದರ ಜೊತೆಗೆ, ಮತ್ತೊಬ್ಬರ ಬದುಕಿನಲ್ಲೂ ಸಂತೋಷದ ಬೆಳಕು ಮೂಡಿಸಿದ್ದಾರೆ ಯುವ ವೇದಿಕೆಯವರು ಎಂದರು, ನೀಡಿದ ಉಡುಗೊರೆಯ ಮೌಲ್ಯಕ್ಕಿಂತ ಅದರ ಹಿಂದಿರುವ ಪ್ರೀತಿ, ಕಾಳಜಿ ಮತ್ತು ಮಾನವೀಯತೆ ದೊಡ್ಡದು. ನಾರಾಯಣ ಗುರುಗಳ ತತ್ವಾದರ್ಶಗಳನ್ನು ಕೇವಲ ಮಾತಿನಲ್ಲಿ ಸೀಮಿತಗೊಳಿಸದೆ, ಇಂತಹ ಸಮಾಜಮುಖಿ ಕಾರ್ಯಗಳ ಮೂಲಕ ಅನುಷ್ಠಾನಗೊಳಿಸುವ ಉದ್ದೇಶ ಒಳ್ಳೆದು ಎಂದು ಬಿಲ್ಲವ ಯುವ ವೇದಿಕೆಗೆ ಶುಭ ಹಾರೈಸಿದರು.

ಬ್ರಹ್ಮಾವರ ಬಿಲ್ಲವ ಸಂಘದ ಅಧ್ಯಕ್ಷರಾದ ಬಿ. ಎನ್. ಶಂಕರ ಪೂಜಾರಿ ಅವರು ದೀಪಾವಳಿಯ ಶುಭಾಶಯ ಸಲ್ಲಿಸಿದರು.

ಬಿಲ್ಲವ ಯುವ ವೇದಿಕೆಯ ಅಧ್ಯಕ್ಷರಾದ ಸಚಿನ್ ಪೂಜಾರಿ ಹೇರೂರವರು ಪ್ರಸ್ತಾವಿಕವಾಗಿ ಮಾತಾಡಿ ಕಾರ್ಯಕ್ರಮದ ಉದ್ದೇಶ ತಿಳಿಸಿದರು. ಈ ಸಂದರ್ಭದಲ್ಲಿ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಸುಶಾಂತ್ ಪೂಜಾರಿ, ಕೋಶಾಧಿಕಾರಿ ಚೇತನ್ ಪೂಜಾರಿ, ಬಿಲ್ಲವ ಸಂಘದ ಕಾರ್ಯದರ್ಶಿ ಶೇಖರ್ ಪೂಜಾರಿ, ಉಪಾಧ್ಯಕ್ಷರಾದ ರಾಜು ಪೂಜಾರಿ ಉಪ್ಪೂರು, ಅಶೋಕ್ ಪೂಜಾರಿ ಹಾರಾಡಿ, ರಾಘು ಪೂಜಾರಿ ಹೇರೂರು, ಜೊತೆ ಕಾರ್ಯದರ್ಶಿ ಶ್ರೀ ಅಶೋಕ್ ಪೂಜಾರಿ (ಇ ), ಮಹಿಳಾ ಘಟಕದ ಅಧ್ಯಕ್ಷರಾದ ಶೋಭಾ ಪೂಜಾರಿ ಹಂದಾಡಿ, ಹಾಗೂ ಶ್ರೀಮತಿ ಶೈಲಾ, ಶ್ರೀಮತಿ ಹೇಮಾ, ಬಾಲಕೃಷ್ಣ ಪೂಜಾರಿ, ಸೀತಾರಾಮ್ ಪೂಜಾರಿ, ಅಶೋಕ್ ಕಲ್ಕಾರ್, ಹಾಗೂ ಬಿಲ್ಲವ ಯುವ ವೇದಿಕೆಯ ಸಚಿನ್ ಪೂಜಾರಿ ಕುಕ್ಕುಡೆ , ರಾಕೇಶ್ ಪೂಜಾರಿ, ಪ್ರತಾಪ್ ಪೂಜಾರಿ, ದೀಪು ಚಾಂತಾರು, ಕಿಶೋರ್ ವಾರಂಬಳ್ಳಿ, ನಿತ್ಯಾನಂದ ಪೂಜಾರಿ, ರಕ್ಷಿತ್ ಕುಂಬ್ರಗೋಡು, ಶಶಾಂಕ್ ಹೇರೂರು, ನಿಖಿಲ್ ಹೊನ್ನಾಳ, ರಮೇಶ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.
ಯುವ ವೇದಿಕೆಯ ಮಾಧ್ಯಮ ಸಂಚಾಲಕರಾದ ಚೇತನ್ ಮಟಪಾಡಿ ಕಾರ್ಯಕ್ರಮ ನಿರೂಪಿಸಿದರು.

spot_img

More articles

LEAVE A REPLY

Please enter your comment!
Please enter your name here