Thursday, October 29, 2026

ಅಗ್ರಿಗೋಲ್ಡ್ ಹಣ ವಾಪಸಾತಿ ವದಂತಿ: ಉಡುಪಿ ಎಸ್ಪಿ ಕಚೇರಿಗೆ ಸಂತ್ರಸ್ತರ ದೌಡು

Must read

ಉಡುಪಿ: ಆಂಧ್ರಪ್ರದೇಶ ಮೂಲದ ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹೂಡಿಕೆ ಮಾಡಿ ಹಣ ಕಳೆದುಕೊಂಡವರಿಗೆ ಹಣ ವಾಪಸ್ ಸಿಗಲಿದೆ ಎಂಬ ವದಂತಿ ಹರಡಿದ ಹಿನ್ನೆಲೆಯಲ್ಲಿ, ನೂರಾರು ಸಂತ್ರಸ್ತರು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ ಘಟನೆ ನಡೆದಿದೆ.
ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ನಷ್ಟ ಅನುಭವಿಸಿರುವ ಸಂತ್ರಸ್ತರ ದಾಖಲೆಗಳನ್ನು ಸಂಗ್ರಹಿಸುವ ಕಾರ್ಯವನ್ನು ಎಸ್ಪಿ ಕಚೇರಿಯಲ್ಲಿ ಕೈಗೊಳ್ಳಲಾಗಿದೆ. ದಿನವೊಂದಕ್ಕೆ 150 ಮಂದಿಯ ದಾಖಲೆಗಳನ್ನು ಸಂಗ್ರಹಿಸಲು ಟೋಕನ್ ನೀಡುವ ವ್ಯವಸ್ಥೆ ಮಾಡಲಾಗಿದೆ. ಆದರೆ, ಹೂಡಿಕೆಯ ಹಣ ಮರಳಿ ಸಿಗಲಿದೆ ಎಂಬ ಸುದ್ದಿ ಹರಡುತ್ತಿದ್ದಂತೆ ಹೆಚ್ಚಿನ ಸಂಖ್ಯೆಯಲ್ಲಿ ಸಂತ್ರಸ್ತರು, ಅದರಲ್ಲೂ ಮಹಿಳೆಯರು ಕಚೇರಿಗೆ ಧಾವಿಸಿದರು.
ಒಂದೇ ದಿನದಲ್ಲಿ ನೂರಾರು ಮಂದಿ ಆಗಮಿಸಿದ್ದರಿಂದ ಟೋಕನ್ ಪಡೆಯಲು ಗೊಂದಲದ ವಾತಾವರಣ ನಿರ್ಮಾಣವಾಯಿತು. ನಮಗೂ ಟೋಕನ್ ನೀಡಿ ಎಂದು ಮಹಿಳಾ ಸಂತ್ರಸ್ತರು ಪೊಲೀಸ್ ಅಧಿಕಾರಿಗಳನ್ನು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಪೊಲೀಸರು ಸಂತ್ರಸ್ತರನ್ನು ಸಮಾಧಾನಪಡಿಸಿ, ದಾಖಲೆ ಸಂಗ್ರಹ ಪ್ರಕ್ರಿಯೆಯ ಕುರಿತು ಮಾಹಿತಿ ನೀಡಲು ಪ್ರಯತ್ನಿಸಿದರು.
ಅಗ್ರಿಗೋಲ್ಡ್ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿ ಕಳೆದುಕೊಂಡವರಲ್ಲಿ ಮಹಿಳೆಯರ ಸಂಖ್ಯೆಯೂ ಹೆಚ್ಚಿದೆ. ತಮ್ಮ ಕಷ್ಟದ ದುಡಿಮೆಯ ಹಣ ಮರಳಿ ಸಿಗಬಹುದು ಎಂಬ ನಿರೀಕ್ಷೆಯಲ್ಲಿ ಅನೇಕರು ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ್ದರು. ಆದರೆ, ಹಣ ವಾಪಸಾತಿ ಕುರಿತ ವದಂತಿಯಿಂದಾಗಿ ಸಂತ್ರಸ್ತರಲ್ಲಿ ಗೊಂದಲ ಉಂಟಾಯಿತು.

spot_img

More articles

LEAVE A REPLY

Please enter your comment!
Please enter your name here