ಉಡುಪಿ: ರಂಗ ತರಂಗ ನಾಟಕ ತಂಡದ ಮಾಲೀಕ, ಸಮಾಜ ಸೇವಕ ಕಾಪು ಲೀಲಾಧರ ಶೆಟ್ಟಿ (68) ಮತ್ತು ಅವರ ಪತ್ನಿ ವಸುಂಧರಾ ಶೆಟ್ಟಿ (59) ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳವಾರ ರಾತ್ರಿ ನಡೆದಿದೆ.
ನಿನ್ನೆ ರಾತ್ರಿ ತಮ್ಮ ಮನೆಯಲ್ಲಿ ದಂಪತಿ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕೌಟಂಬಿಕ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಸೌಮ್ಯ ಸ್ವಭಾವದವರಾಗಿದ್ದ ಲೀಲಾಧರ ಶೆಟ್ಟಿಯವರು ಕಾಪುವಿನಲ್ಲಿ ರಂಗ ತರಂಗ ಎಂಬ ನಾಟಕ ಸಂಸ್ಥೆಯನ್ನು ಹುಟ್ಟು ಹಾಕಿದ್ದರು. ಸದಾ ಸಮಾಜಪರ ಕಾಳಜಿ ಹೊಂದಿದ್ದ ಅವರು ಯಾವುದೇ ಕ್ಷಣದಲ್ಲಿ ಕೂಡ ಅಶಕ್ತರ ನೆರವಿಗೆ ಧಾವಿಸುತ್ತಿದ್ದರು. ಆದರೂ ಇತ್ತೀಚೆಗೆ ಹಣಕಾಸಿನ ತೊಂದರೆ ಕೂಡ ಹೊಂದಿದ್ದರು ಎನ್ನಲಾಗಿದೆ.
ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.