Thursday, January 23, 2025

ಉಡುಪಿ: ಜ.19ರಂದು ಸೈಕ್ಲಿಂಗ್ ಸ್ಪರ್ಧೆ ಹಿನ್ನೆಲೆ; ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ

Must read

ಉಡುಪಿ: ಕರ್ನಾಟಕ ಕ್ರೀಡಾ ಕೂಟದ ‘ಸೈಕ್ಲಿಂಗ್ ಸ್ಪರ್ಧೆ’ ಯನ್ನು ಬ್ರಹ್ಮಾವರ ತಾಲೂಕಿನ ಕೊಳಲಗಿರಿ ವಾಟರ್ ಟ್ಯಾಂಕ್ ನಿಂದ ಆರಂಭಿಸಿ, ಪೆರ್ಡೂರು ಮಾರ್ಗದಲ್ಲಿ ಬರುವ ಕುಕ್ಕೆಹಳ್ಳಿ ಜಂಕ್ಷನ್ ಸಮೀಪದ ಶಾಂತಿವನ ಜಂಕ್ಷನ್ ವರೆಗೆ ಸುಮಾರು 10 ಕಿ.ಮೀ ವ್ಯಾಪ್ತಿಯಲ್ಲಿ ಆಯೋಜಿಸಲಾಗಿದೆ. ಈ ಹಿನ್ನೆಲೆಯಲ್ಲಿ ಈ ಕೆಳಕಂಡ ರಸ್ತೆಯನ್ನು ಝೀರೋ ಟ್ರಾಫಿಕ್ ಮಾಡುವುದು ಅಗತ್ಯವಾಗಿದ್ದು, ವಾಹನ ಸಂಚಾರ ಮಾರ್ಗ ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಡಾ. ವಿದ್ಯಾಕುಮಾರಿ‌ ಆದೇಶ ಹೊರಡಿಸಿದ್ದಾರೆ.

ನಾಳೆ (ಜ. 19) ಬೆಳಿಗ್ಗೆ 6 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಸೈಕ್ಲಿಂಗ್ ಸ್ಪರ್ಧೆ ನಡೆಯುವ ಮಾರ್ಗದಲ್ಲಿ ಸಂಚರಿಸುವ ವಾಹನಗಳಿಗೆ ಈ ಕೆಳಗಿನಂತೆ ಮಾರ್ಗ ಬದಲಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.

ಪೆರ್ಡೂರು ಹಾವಂಜೆ-ಕೊಳಲಗಿರಿ ಅಮ್ಮುಂಜೆ ಉಪ್ಪೂರು ಮಾರ್ಗವಾಗಿ ರಾ.ಹೆ 66 ಕ್ಕೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಹಿರಿಯಡ್ಕ ಮಣಿಪಾಲ ಮಾರ್ಗದಲ್ಲಿ ಉಡುಪಿಗೆ ತೆರಳುವುದು.
ಪೇತ್ರಿಯಿಂದ ಪೆರ್ಡೂರು ಕಡೆಗೆ ಹೋಗುವ ವಾಹನಗಳು ಬದಲಿ ಮಾರ್ಗವಾಗಿ ಕರ್ಜೆ-ಅಲಂಗಾರು ಮಾರ್ಗವಾಗಿ ಪೆರ್ಡೂರು ಕಡೆಗೆ ತೆರಳುವುದು.

ಪೇತ್ರಿಯಿಂದ ಕುಕ್ಕೆಹಳ್ಳಿಗೆ ಹೋಗುವ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ
ರಾ.ಹೆ 66 ರಿಂದ ಉಪ್ಪೂರು-ಉಗ್ಗೆಲ್ ಬೆಟ್ಟು ನಂದಿನಿ ಕೆ.ಎಂಎಫ್- ಕೊಳಲಗಿರಿ ಮಾರ್ಗದ ವಾಹನಗಳ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ರಾ.ಹೆ 66ರಿಂದ ಕೆ.ಜಿ ರಸ್ತೆ ಅಮ್ಮುಂಜೆ-ಕೊಳಲಗಿರಿ-ಹಾವಂಜೆ-ಕುಕ್ಕೆಹಳ್ಳಿ ಸಂಚಾರವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.

spot_img

More articles

LEAVE A REPLY

Please enter your comment!
Please enter your name here