ಉಡುಪಿ: ಹೊಸ ವರ್ಷ ಮತ್ತು ವರ್ಷಾಂತ್ಯದ ರಜೆಗಳ ಹಿನ್ನೆಲೆಯಲ್ಲಿ ನಗರದಲ್ಲಿ ಸಂಚಾರ ದಟ್ಟಣೆ ವಿಪರೀತವಾಗಿದ್ದು, ಸಂಚಾರ ದಟ್ಟಣೆ ತಗ್ಗಿಸುವ ನಿಟ್ಟಿನಲ್ಲಿ ವಾಹನ ಸಂಚಾರ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ಈ ಮಾರ್ಗ ಬದಲಾವಣೆ ಇಂದಿನಿಂದ ಜ.2 ರ ವರೆಗೆ ಇರಲಿದೆ ಎಂದು ಎಸ್ಪಿ ಡಾ. ಅರುಣ್ ಕೆ ತಿಳಿಸಿದ್ದಾರೆ.
ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಣಿಪಾಲ ಕಡೆಯಿಂದ ಬರುವ ಸರಕು ಲಘು ವಾಹನ, ಮಂಗಳೂರು, ಕಾಪು ಕಡೆ ಹೋಗುವವರು ಶಾರದಾ ಕಲ್ಯಾಣ ಮಂಟಪದ ಕಡೆಯಿಂದ ಚಲಿಸಬೇಕು.
ಕಲ್ಸಂಕ ವೃತ್ತ’:
ಗುಂಡಿಬೈಲು ಕಡೆಯಿಂದ ಬರುವ ವಾಹನಗಳು ಕಡಿಯಾಳಿ ಎದುರು ತಿರುಗಿಸಿಕೊಂಡು ಕೃಷ್ಣಮಠ ಮತ್ತು ಉಡುಪಿ ಕಡೆ ತೆರಬೇಕು.
ಮಣಿಪಾಲ ಕಡೆಯಿಂದ ಬಂದು ಗುಂಡಿಬೈಲ ಕಡೆ ಹೋಗುವವರು ಸಿಟಿ ಬಸ್ ನಿಲ್ದಾಣದ ಹತ್ತಿರ ತಿರುಗಿಸಿಕೊಂಡು ಬರಬೇಕು
ಕರಾವಳಿ ಜಂಕ್ಷನ್ :
ಮಲ್ಪೆಯಿಂದ ಬರುವವರು ಕರಾವಳಿಗೆ ಬಂದು ಎಡಕ್ಕೆ ತಿರುಗಿ ಸರ್ವಿಸ್ ರಸ್ತೆಯಲ್ಲಿ ಚಲಿಸಿ ನಿಟ್ಟೂರು (ಆಭರಣ ಮೋಟರ್ಸ್) ಎದುರಿಗೆ U Turn ಮಾಡಿಕೊಂಡು ನಗರದ ಕಡೆ ಬರಬೇಕು.
ಮಂಗಳೂರು ಕಡೆಯಿಂದ ಬರುವವರು ಮಲ್ಪೆ ಹೋಗುವವರನ್ನು ಹೊರತುಪಡಿಸಿ ಉಳಿದವರೆಲ್ಲರೂ ನಿಟ್ಟೂರು (ಆಭರಣ ಮೋಟರ್ಸ್) ಎದುರು ತಿರುಗಿಸಿ ಉಡುಪಿಗೆ ಬರಬೇಕು.
ಮಲ್ಪೆ:
ಮಲ್ಪೆ ಬೀಚ ಕಡೆಯಿಂದ ಬರುವವರು ಬಲರಾಮ ಸರ್ಕಲನಿಂದ ಹೊರಟು ಹೂಡೆ, ನೇಜಾರು ಮಾರ್ಗ ಬಳಸಿ ಸಂತೆಕಟ್ಟೆಯಿಂದ ರಾಷ್ಟ್ರೀಯ ಹೆದ್ದಾರಿ ಸೇರಬೇಕು.