Friday, November 15, 2024

ನ.7ರಿಂದ ಉಡುಪಿ ಜಿಲ್ಲೆಯಲ್ಲಿ ಪಹಣಿ ಆಧಾರ್ ಜೋಡಣೆ ಅಭಿಯಾನ

Must read

ಉಡುಪಿ: ಪಹಣಿ ಆಧಾರ್ ಜೋಡಣೆ ಕಾರ್ಯವು ಜಿಲ್ಲೆಯಲ್ಲಿ ಪ್ರಗತಿಯಲ್ಲಿದೆ. ಸದರಿ ಪ್ರಕ್ರಿಯೆಯಲ್ಲಿ ಗ್ರಾಮ ಆಡಳಿತ ಅಧಿಕಾರಿಗಳು ಖಾತಾದಾರರು ಮರಣ ಹೊಂದಿರುವ ಕುರಿತು ತಂತ್ರಾಂಶದಲ್ಲಿ ನಮೂದಿಸಿದ್ದು, ಇಂತಹ ಪ್ರಕರಣಗಳಲ್ಲಿ ಪೌತಿ ಅಥವಾ ವಾರೀಸು ಖಾತೆ ಅಂದೋಲನವನ್ನು ಆಯಾಯ ತಾಲೂಕು ಸಭಾಂಗಣದಲ್ಲಿ ನಡೆಸಲಾಗುತ್ತಿದೆ. ಅದರ ವಿವರ ಈ‌ ಕೆಳಕಂಡಂತಿದೆ.

ಉಡುಪಿ ತಾಲೂಕಿನಲ್ಲಿ ನವೆಂಬರ್ 7 ರಂದು, ಕುಂದಾಪುರ ತಾಲೂಕಿನಲ್ಲಿ ನವೆಂಬರ್ 8 ರಂದು, ಕಾರ್ಕಳ ತಾಲೂಕಿನಲ್ಲಿ ನವೆಂಬರ್ 11 ರಂದು, ಬ್ರಹ್ಮಾವರ ತಾಲೂಕಿನಲ್ಲಿ ನವೆಂಬರ್ 12 ರಂದು, ಬೈಂದೂರು ತಾಲೂಕಿನಲ್ಲಿ ನವೆಂಬರ್ 13 ರಂದು, ಕಾಪು ತಾಲೂಕಿನಲ್ಲಿ ನವೆಂಬರ್ 14 ರಂದು ಹಾಗೂ ಹೆಬ್ರಿ ತಾಲೂಕಿನಲ್ಲಿ ನವೆಂಬರ್ 15 ರಂದು ಆಯಾಯ ತಾಲೂಕಿನ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿದೆ.

ಜಿಲ್ಲೆಯಲ್ಲಿ ಪೌತಿ/ ವಾರೀಸು ಖಾತೆ ಮಾಡಲು ಬಾಕಿ ಇರುವ ಜಮೀನಿನ ವಾರೀಸುದಾರರು ಆಯಾಯ ತಾಲ್ಲೂಕು ಕಛೇರಿ ಅಥವಾ ತಮ್ಮ ಗ್ರಾಮದ ಗ್ರಾಮ ಆಡಳಿತ ಅಧಿಕಾರಿಗಳನ್ನು ತಕ್ಷಣವೇ ಸಂಪರ್ಕಿಸಿ ಮಾಹಿತಿಯನ್ನು ಪಡೆದು, ಸೂಕ್ತ ದಾಖಲಾತಿಗಳೊಂದಿಗೆ ಪೌತಿ ಅಂದೋಲನದಲ್ಲಿ ಭಾಗವಹಿಸುವಂತೆ ಹಾಗೂ ಈ ಪೌತಿ ಅಂದೋಲನದಡಿ ಜಮೀನಿನ ದಾಖಲೆಗಳನ್ನು ಪಹಣಿಯಲ್ಲಿ ಇಂಧೀಕರಿಸಲು ಕ್ರಮ ಕೈಗೊಳ್ಳುಲಾಗುವುದರಿಂದ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಸದಪಯೋಗವನ್ನು ಪಡೆದುಕೊಳ್ಳುವಂತೆ ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

spot_img

More articles

LEAVE A REPLY

Please enter your comment!
Please enter your name here