ಉಡುಪಿ: ಉಡುಪಿಯಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಅಂದರೆ ಹುಲಿ ವೇಷದ್ದೇ ಕಲರವ. ಐವತ್ತಕ್ಕೂ ಅಧಿಕ ಹುಲಿವೇಷ ತಂಡಗಳು ಈ ಬಾರಿ ಬಣ್ಣ ಹಚ್ಚಿದ್ದು, ಅಷ್ಟಮಿಯ ಮೊದಲ ದಿನ ದೇವರ ಸೇವೆ ನಡೆಸುವ ಮೂಲಕ ತಮ್ಮ ಪ್ರದರ್ಶನ ಆರಂಭಿಸುತ್ತಿವೆ. ಲೋಬಾನ ಸೇವೆಯ ನಂತರ ಮನೆ ಮನೆಗಳಿಗೆ ತೆರಳಿ ಹೆಜ್ಜೆ ಹಾಕುತ್ತಾರೆ.
ಉಡುಪಿಯ ಮಾರ್ಪಳ್ಳಿ ಚಂಡೆ, ತುಳುನಾಡ ಟೈಗರ್ಸ್ ಉಡುಪಿ, ಟೈಗರ್ಸ್ ಫ್ರೆಂಡ್ಸ್ ಉಡುಪಿ, ದಿ. ಅಶೋಕ್ ರಾಜ್ ಕಾಡಬೆಟ್ಟು ಹುಲಿವೇಷ ತಂಡ ಈ ಮೊದಲಾದ ಪ್ರತಿಷ್ಠಿತ ಹುಲಿವೇಷದ ತಂಡಗಳು ಈ ಬಾರಿ ಅದ್ಧೂರಿ ವೇಷದಗಳೊಂದಿಗೆ ತಿರುಗಾಟ ಆರಂಭಿಸಿದೆ. ಹುಲಿವೇಷವೆಂದರೆ ಕರಾವಳಿಗಳು ರೋಮಾಂಚನಗೊಳ್ಳುತ್ತಾರೆ. ತಾಸೆಯ ಪೆಟ್ಟಿಗೆ ನೂರಾರು ಜನ ಏಕಕಾಲದಲ್ಲಿ ಕುಣಿಯುವುದನ್ನು ನೋಡುವುದೇ ಒಂದು ಸುಂದರ ಅನುಭವ. ಹುಲಿವೇಷ ನೋಡಲೆಂದೇ ಅಷ್ಟಮಿಗೆ ಕಾಯುವ ಲಕ್ಷಾಂತರ ಭಕ್ತರಿದ್ದಾರೆ. ನಗರದೆಲ್ಲೆಡೆ ಇಂದು ನೂರಾರು ಹುಲಿವೇಷಧಾರಿಗಳು ಅಷ್ಠಮಿಗೆ ವಿಶೇಷ ಮೆರುಗು ತುಂಬುತ್ತಿದ್ದಾರೆ.