ಉಡುಪಿ: ಮಹಾಲಕ್ಷ್ಮೀ ಕೋ ಆಪರೇಟಿವ್ ಬ್ಯಾಂಕ್ ಲಿ. ಉಡುಪಿ ಇದರ 2024 ನೇ ಸಾಲಿನ ಡೈರಿಯನ್ನು ಜಿ. ಶಂಕರ್ ಫ್ಯಾಮಿಲಿ ಟ್ರಸ್ಟಿನ ಪ್ರವರ್ತಕರಾದ ನಾಡೋಜ ಡಾ. ಜಿ. ಶಂಕರ್ ಬಿಡುಗಡೆ ಮಾಡಿದರು.
ಬೆಣ್ಣೆಕುದ್ರು ಕುಲಮಹಾಸ್ತ್ರೀ ದೇವಸ್ಥಾನದ ಸನ್ನಿಧಿಯಲ್ಲಿ ವಾರ್ಷಿಕ ಉತ್ಸವದ ಸಂದರ್ಭದಲ್ಲಿ ಡೈರಿ ಬಿಡುಗಡೆ ಮಾಡಿ ಮಾತನಾಡಿದ ಅವರು, ಶಾಸಕ ಯಶ್ ಪಾಲ್ ಸುವರ್ಣ ಅಧ್ಯಕ್ಷತೆಯಲ್ಲಿ ಬ್ಯಾಂಕ್ ಸರ್ವಾಂಗೀಣ ಪ್ರಗತಿ ಸಾಧಿಸುತ್ತಿದ್ದು, ಬ್ಯಾಂಕಿನ ಪ್ರಗತಿ ನಿರಂತರವಾಗಿ ಸಾಗಿಬರಲಿ ಎಂದು ಹಾರೈಸಿದರು.
ಬ್ಯಾಂಕಿನ ಅಧ್ಯಕ್ಷರಾದ ಯಶ್ ಪಾಲ್ ಸುವರ್ಣ ಮಾತನಾಡಿ, ಬ್ಯಾಂಕಿನ ಗ್ರಾಹಕರು, ಸದಸ್ಯರು, ಸಿಬ್ಬಂದಿ ವರ್ಗ ಹಾಗೂ ಆಡಳಿತ ಮಂಡಳಿಯ ಸಹಕಾರದಿಂದ ಮಹಾಲಕ್ಷ್ಮೀ ಬ್ಯಾಂಕ್ ಕರಾವಳಿ ಭಾಗದ ಪ್ರತಿಷ್ಠಿತ ಸಹಕಾರಿ ಸಂಸ್ಥೆಯಾಗಿ ಗುರುತಿಸಿಕೊಂಡಿದ್ದು, ಮುಂದಿನ ದಿನದಲ್ಲಿಯೂ ಬ್ಯಾಂಕಿನ ಪ್ರಗತಿಗೆ ಸರ್ವರ ಸಹಕಾರ ಕೋರಿದರು.
ಈ ಸಂದರ್ಭಲ್ಲಿ ಬೆಣ್ಣೆಕುದ್ರು ಕುಲ ಮಹಾಸ್ತ್ರೀ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿಯ ಅಧ್ಯಕ್ಷರಾದ ಶ್ರೀ ಆನಂದ ಸಿ. ಕುಂದರ್, ದ.ಕ. ಮೊಗವೀರ ಮಹಾಜನ ಸಂಘದ ಅಧ್ಯಕ್ಷರಾದ ಶ್ರೀ ಜಯ ಸಿ. ಕೋಟ್ಯಾನ್, ಬ್ಯಾಂಕಿನ ಉಪಾಧ್ಯಕ್ಷರಾದ ಶ್ರೀ ವಾಸುದೇವ ಸಾಲ್ಯಾನ್, ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷರಾದ ಶ್ರೀ ದಯಾನಂದ ಸುವರ್ಣ, ಮೀನುಗಾರ ಮುಖಂಡರಾದ ಶ್ರೀ ರಾಮಚಂದ್ರ ಕುಂದರ್, ಶ್ರೀ ಹಿರಿಯಣ್ಣ ಕಿದಿಯೂರು, ಶ್ರೀ ಕಿಟ್ಟಪ್ಪ ಅಮೀನ್, ಶ್ರೀ ಸುಭಾಷ್ ಮೆಂಡನ್, ಶ್ರೀ ಸತೀಶ್ ಕುಂದರ್, ಶ್ರೀ ಸತೀಶ್ ಅಮೀನ್, ಶ್ರೀ ನಾಗರಾಜ ಕುಂದರ್, ಶ್ರೀ ಪ್ರಕಾಶ್ ಬಂಗೇರ, ಶ್ರೀ ಜಗನ್ನಾಥ ಅಮೀನ್, ಶ್ರೀ ವಿನಯ ಕರ್ಕೇರ, ಬ್ಯಾಂಕಿನ ವ್ಯವಸ್ಥಾಪನ ನಿರ್ದೇಶಕರಾದ ಶ್ರೀ ಜಗದೀಶ್ ಮೊಗವೀರ, ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀಮತಿ ಶಾರಿಕ ಕಿರಣ್ ಉಪಸ್ಥಿತರಿದ್ದರು.