Friday, October 18, 2024

ಉಡುಪಿ: ಅಪಘಾತಕ್ಕೆ ಆಹ್ವಾನ ನೀಡುತ್ತಿವೆ ಸಿಗ್ನಲ್ ಕಂಬಗಳು; ಪ್ರತಿಫಲನ ಸ್ಟಿಕ್ಕರ್ ಅಂಟಿಸಿ ಸಾಮಾಜಿಕ ಬದ್ಧತೆ ಮೆರೆದ ಸಾಮಾಜಿಕ ಕಾರ್ಯಕರ್ತರು

Must read

ಉಡುಪಿ: ಉಡುಪಿ ಹಳೆ ಡಯಾನ ವೃತ್ತ ಬಳಿ ಹಾದುಹೋಗುವ ಪಾದಚಾರಿ ರಸ್ತೆಯ ಮೇಲೆ ಸಿಗ್ನಲ್ ಕಂಬಗಳು ಮತ್ತು ಅದರ ಜೋಡಣಾ ಪರಿಕರಗಳನ್ನು ಕೆಲವು ತಿಂಗಳಿನಿಂದ ದಾಸ್ತಾನು ಮಾಡಲಾಗಿದ್ದು, ಇದರಿಂದ ಈ ಸೂಕ್ಷ್ಮ ಸ್ಥಳವು ಇದೀಗ ಅಪಘಾತ ವಲಯವಾಗಿ ಮಾರ್ಪಟ್ಟಿದೆ.


ಅನಾಹುತ ಸಂಭವಿಸುವ ಮೊದಲು ಇಲ್ಲಿ ದಾಸ್ತಾನಿಟ್ಟಿರುವ ಪರಿಕರಗಳನ್ನು ಜಿಲ್ಲಾಡಳಿತ ತೆರವುಗೊಳಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ ಮೇಸ್ತ ಶಿರೂರು ಒತ್ತಾಯಿಸಿದ್ದಾರೆ.


ಉಡುಪಿಯ ಪರ್ಯಾಯೋತ್ಸವದ ಸಿದ್ಧತೆಗಳು ನಡೆಯುತ್ತಿದೆ. ಪರ್ಯಾಯ ಮೆರವಣಿಗೆ ಈ ರಸ್ತೆಯ ಮೂಲಕ ಹಾದುಹೋಗುತ್ತದೆ. ಲಕ್ಷಾಂತರ ಭಕ್ತರು ಉಡುಪಿಗೆ ಬರುವ ನಿರೀಕ್ಷೆ ಇದೆ. ಹಾಗಾಗಿ ಸಿಗ್ನಲ್ ಕಂಬಗಳ ಪರಿಕರಗಳಿಂದಾಗಿ ಭಕ್ತರ ಸಂಚಾರಕ್ಕೆ ತೊಂದರೆಯಾಗುವುದಲ್ಲದೆ, ಸಮಸ್ಯೆ ಮತ್ತಷ್ಟು ಉಲ್ಭಣವಾಗುವ ಸಾಧ್ಯತೆ ಇದೆ.


ನಗರದಲ್ಲಿ ವಾಹನ ದಟ್ಟಣೆ ಹೆಚ್ಚಳ ಕಂಡಿದ್ದು, ಸುಗಮ ಸಂಚಾರ ವ್ಯವಸ್ಥೆಗಾಗಿ ಸಿಗ್ನಲ್ ಕಂಬ ಅಳವಡಿಸುವ ಯೋಜನೆ ರೂಪಿಸಲಾಗಿತ್ತು. ಕಂಬ ಅಳವಡಿಸುವ ಕಾಮಗಾರಿ ನಡೆಯುತ್ತಿದೆ. ನಗರದ ತ್ರಿವೇಣಿ ವೃತ್ತ, ಹಳೆ ಡಯಾನ ವೃತ್ತದಲ್ಲಿ ಸಿಗ್ನಲ್ ಕಂಬದ ತಳಪಾಯ ಕಾಮಗಾರಿ ಮುಗಿದಿದೆ. ಆದರೆ ಕಂಬ ಜೋಡಿಸುವ ಕಾಮಗಾರಿ ಸ್ಥಗಿತಗೊಂಡು ಮೂರು ತಿಂಗಳೇ ಕಳೆದಿದೆ. ಜೋಡಣೆಗೆ ತಂದಿರುವ ಲಾರಿಗಟ್ಟಲೆ ಸಾಮಾಗ್ರಿಗಳನ್ನು ಪಾದಚಾರಿ ರಸ್ತೆಯಲ್ಲಿ ಸಂಗ್ರಹಿಸಿಡಲಾಗಿದೆ.

ಪಾದಚಾರಿಗಳು ನಡೆದಾಡಲು ಆಗದೆ ರಸ್ತೆಯಲ್ಲೆ ನಡೆದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಡಯಾನ ವೃತ್ತದಲ್ಲಿ ರಸ್ತೆಯು ತಿರುವು ಪಡೆದಿರುವುದರಿಂದ ಇಲ್ಲಿ ಬಹಳಷ್ಟು ದ್ವಿಚಕ್ರ ವಾಹನ ಸವಾರರಿಗೆ ಕಂಬಗಳು ಗೋಚರಕ್ಕೆ ಬಾರದೆ ಅಪಘಾತವಾಗಿರುವ ಘಟನೆಗಳು ನಡೆದಿವೆ. ಇಲ್ಲಿ ಎದುರಾಗಿರುವ ಸಮಸ್ಯೆಯನ್ನು ಪರಿಶೀಲಿಸಿ ಜಿಲ್ಲಾಡಳಿತವು ತಕ್ಷಣ ಸಮಸ್ಯೆ ಬಗೆಹರಿಸಬೇಕೆಂದು ನಾಗರಿಕ ಸಮಿತಿಯ ಕಾರ್ಯಕರ್ತರು ಆಗ್ರಹಪಡಿಸಿದ್ದಾರೆ.


ಯಾವುದೇ ಅವಘಡ ನಡೆಯದಂತೆ ಮುಂಜಾಗೃತ ಕ್ರಮವಾಗಿ ರಸ್ತೆಯಲ್ಲಿ ಮಲಗಿಸಿರುವ ಕಂಬಗಳಿಗೆ ಪ್ರತಿಫಲನ ಪಟ್ಟಿ (ರಿಪ್ಲಕ್ಟರ್ ಸ್ಟಿಕ್ಕರ್) ಅಂಟಿಸಿ ಸಾಮಾಜಿಕ ಪ್ರಜ್ಞೆ ತೋರಿದ್ದಾರೆ. ಸಾಮಾಜಿಕ ಕಾರ್ಯಕರ್ತರ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ

spot_img

More articles

LEAVE A REPLY

Please enter your comment!
Please enter your name here