Home ಅಪರಾಧ ಉದ್ಯಾವರ ಸೇತುವೆ ಮೇಲೆ ಸ್ಕೂಟರ್ ಬಿಟ್ಟು ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ

ಉದ್ಯಾವರ ಸೇತುವೆ ಮೇಲೆ ಸ್ಕೂಟರ್ ಬಿಟ್ಟು ಯುವಕ ನಾಪತ್ತೆ: ನದಿಗೆ ಹಾರಿರುವ ಶಂಕೆ

ಉಡುಪಿ: ಉದ್ಯಾವರ ಸೇತುವೆ ಮೇಲೆ ಸ್ಕೂಟರ್, ಚಪ್ಪಲಿ ಬಿಟ್ಟು ಯುವಕನೋರ್ವ ನಾಪತ್ತೆಯಾಗಿದ್ದಾನೆ.


ನಾಪತ್ತೆಯಾದ ಯುವಕ‌ ಉಡುಪಿಯ ಖಾಸಗಿ ಎಲೆಕ್ಟ್ರಾನಿಕ್ ಸಂಸ್ಥೆ ಉದ್ಯೋಗಿಯೆಂದು ತಿಳಿದುಬಂದಿದ್ದು, ಸೇತುವೆಯ ಮೇಲೆ ಸ್ಕೂಟರ್ ನಿಲ್ಲಿಸಿ ನದಿಗೆ ಹಾರಿರುವ ಶಂಕೆ ವ್ಯಕ್ತವಾಗಿದೆ.

ಕಾಪು ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿದ್ದು, ಸ್ಥಳೀಯ ಮೀನುಗಾರರ ಸಹಾಯದಿಂದ ದೋಣಿಯಲ್ಲಿ ಹುಡುಕಾಟ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.

Exit mobile version