Home ಅಪರಾಧ ಉಡುಪಿ: ಹೋಮ್ ನರ್ಸ್ ಕೆಲಸಕ್ಕೆ ಬಂದು ಲಕ್ಷಾಂತರ ರೂ. ಕಳವು: ಆರೋಪಿಯ ಸೆರೆ

ಉಡುಪಿ: ಹೋಮ್ ನರ್ಸ್ ಕೆಲಸಕ್ಕೆ ಬಂದು ಲಕ್ಷಾಂತರ ರೂ. ಕಳವು: ಆರೋಪಿಯ ಸೆರೆ

ಉಡುಪಿ: ಇಲ್ಲಿನ ಪುತ್ತೂರು ಗ್ರಾಮದ ಸಂತೋಷ್ ಎಂಬವರ ಮನೆಯಲ್ಲಿ ಹಾಗೂ ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದ ಲಕ್ಷಾಂತರ ರೂ. ನಗದು ಕಳವು‌ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಉಡುಪಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.


ಬಂಧಿತ ಆರೋಪಿಯನ್ನು ಹುನಗುಂದ ತಾಲೂಕಿನ ಪ್ರವೀಣ್‌ ಕುಮಾರ್‌ ಜಾಲಪ್ಪ ಹರದೊಳ್ಳ (34) ಎಂದು ಗುರುತಿಸಲಾಗಿದೆ. ಆರೋಪಿ ಸಂತೋಷ್ ಅವರ ಮನೆಯಲ್ಲಿ ಹೋಮ್ ನರ್ಸ್ ಆಗಿ ಕೆಲಸ ಮಾಡುತ್ತಿದ್ದನು. ಮನೆ ಮಾಲೀಕ ಮಾತಾ ಸೆಲ್ಯೂಷನ್‌ ಹೋಮ್‌ ನರ್ಸ್‌ ಎಂಬ ಸಂಸ್ಥೆಯ ಮೂಲಕ ಆತನನ್ನು ಕೆಲಸಕ್ಕೆ ಇಟ್ಟುಕೊಂಡಿದ್ದರು. ಡಿ. 4ರಂದು ಸಂಜೆ ಪ್ರವೀಣ್ ಕುಮಾರ್ ಮನೆಯಿಂದ ಕಾಣೆಯಾಗಿದ್ದನು. ಆತ ಮನೆಯಲ್ಲಿ ಹಾಗೂ ಕಾರಿನ ಡ್ಯಾಶ್ ಬೋರ್ಡ್ ನಲ್ಲಿಟ್ಟಿದ್ದ 3,45,000 ಲಕ್ಷ ರೂ. ನಗದು ಕಳವು ಮಾಡಿಕೊಂಡು ಹೋಗಿರುವುದಾಗಿ ಮಾಲೀಕ ಸಂತೋಷ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.


ಪ್ರಕರಣ ತನಿಖೆಗೆ ಇಳಿದ ಉಡುಪಿ ನಗರ ಪೊಲೀಸ್‌ ಠಾಣಾ ಪೊಲೀಸ್‌ ನಿರೀಕ್ಷಕ ಮಂಜಪ್ಪ ಡಿ.ಆರ್‌. ನೇತೃತ್ವದ, ಪಿಎಸ್‌ಐ ಪುನೀತ್‌ ಕುಮಾರ್‌ ಬಿ.ಇ, ಈರಣ್ಣ ಶಿರಗುಂಪಿ, ಭರತೇಶ್‌ ಕಂಕಣವಾಡಿ ಹಾಗೂ ಎಎಸ್‌ಐ ವಿಜಯ್‌, ಸಿಬ್ಬಂದಿ ಸತೀಶ್‌, ನೇತ್ರಾವತಿ, ಕಿರಣ್‌, ಆನಂದ, ಒಬಳೇಶ್‌ ಹಾಗೂ ಶಿವಕುಮಾರ್‌ ಒಳಗೊಂಡ ವಿಶೇಷ ತಂಡವು ಡಿ. 7ರಂದು ಆರೋಪಿ ಪ್ರವೀಣ್ ನನ್ನು ಬಾಗಲಕೋಟೆಯಲ್ಲಿ ವಶಕ್ಕೆ ಪಡೆದು, ಆತನಿಂದ ಕಳವು ಮಾಡಿದ್ದ 3,13,500 ರೂಪಾಯಿಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ.

Exit mobile version