Home ಅಪರಾಧ ಅಲೆವೂರು: ಟೆಂಪೋ – ಸ್ಕೂಟರ್ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಅಲೆವೂರು: ಟೆಂಪೋ – ಸ್ಕೂಟರ್ ಮಧ್ಯೆ ಭೀಕರ ಅಪಘಾತ; ಸವಾರ ಸ್ಥಳದಲ್ಲೇ ಸಾವು

ಉಡುಪಿ: ಟೆಂಪೋ ಹಾಗೂ ಸ್ಕೂಟರ್ ನಡುವೆ ನಡೆದ ಭೀಕರ ಅಪಘಾತದಲ್ಲಿ ಸ್ಕೂಟರ್ ಸವಾರ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಅಲೆವೂರಿನ ವಿಠ್ಠಲ ಸಭಾಭವನದ ಬಳಿ ಇಂದು ಸಂಜೆ 6.30ಕ್ಕೆ ನಡೆದಿದೆ.

ಮೃತ ಸವಾರನನ್ನು ಅಲೆವೂರು ಪ್ರಗತಿನಗರದ ನಿವಾಸಿ ಮಹಮ್ಮದ್ ತನ್ಸಿಲ್ (28) ಎಂದು ಗುರುತಿಸಲಾಗಿದೆ. ಈತ ತನ್ನ ಸ್ಕೂಟರ್ ನಲ್ಲಿ ಅಲೆವೂರಿನಿಂದ ಮಣಿಪಾಲ ಕಡೆಗೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಣಿಪಾಲ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲು ಸಮಾಜ ಸೇವಕ ನಿತ್ಯಾನಂದ ಒಳಕಾಡು ಇಲಾಖೆಗೆ ಸಹಕರಿಸಿದರು.

Exit mobile version