Home ಕರಾವಳಿ ಉಡುಪಿ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ಶಾರದಾ ಮಹೋತ್ಸವ ಸಂಪನ್ನ

ಉಡುಪಿ ಲಕ್ಷ್ಮೀ ವೆಂಕಟೇಶ ದೇವಸ್ಥಾನ: ಶಾರದಾ ಮಹೋತ್ಸವ ಸಂಪನ್ನ

ಉಡುಪಿ: ಉಡುಪಿ ಶ್ರೀಲಕ್ಷ್ಮೀ ವೆಂಕಟೇಶ ದೇವಸ್ಥಾನದ ಶ್ರೀ ಶಾರದಾ ದೇವಿಯ ವಿಸರ್ಜನಾ ಶೋಭಾಯಾತ್ರೆ ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.
ಉಡುಪಿ ನಗರದ ಮುಖ್ಯರಸ್ತೆಗಳಲ್ಲಿ ವೈಭವದ ಮೆರವಣಿಗೆ ಸಾಗಿಬಂತು. ದೇವಳದ ಪದ್ಮ ಸರೋವರದಲ್ಲಿ ಶ್ರೀ ಶಾರದಾ ದೇವಿಯ ವಿಸರ್ಜನೆ ನೆರವೇರಿತು.

ದೇವಳದ ಅರ್ಚಕ ವಿನಾಯಕ ಭಟ್ , ದಯಘನ್ ಭಟ್ , ದೀಪಕ್ ಭಟ್ ,ದೇವಳದ ಆಡಳಿತ ಮೊಕ್ತೇಸರ ಪಿ.ವಿ. ಶೆಣೈ , ಜಿಎಸ್ ಬಿ ಯುವಕ ಮಂಡಳಿ, ಮಹಿಳಾ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

Exit mobile version