Home ಕರಾವಳಿ ಪರಶುರಾಮನ ಮೂರ್ತಿ ದಿಢೀರ್ ಮಾಯ: ಡ್ರೋನ್ ಕ್ಯಾಮರಾದಲ್ಲಿ ಬಯಲಾಯ್ತು ಮೂರ್ತಿಯ ಅಸಲಿಯತ್ತು

ಪರಶುರಾಮನ ಮೂರ್ತಿ ದಿಢೀರ್ ಮಾಯ: ಡ್ರೋನ್ ಕ್ಯಾಮರಾದಲ್ಲಿ ಬಯಲಾಯ್ತು ಮೂರ್ತಿಯ ಅಸಲಿಯತ್ತು

ಉಡುಪಿ: ಬೈಲೂರಿನ ಉಮಿಕಲ್ ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲಾದ ಕಂಚಿನದ್ದೆಂದು ಹೇಳಲಾಗುತ್ತಿದ್ದ ಪರಶುರಾಮನ ವಿಗ್ರಹದ ಅಸಲಿಯತ್ತು ಕಡೆಗೂ ಬಯಲಾಗಿದೆ. ಡ್ರೋನ್ ಕ್ಯಾಮರಾದಲ್ಲಿ ನಕಲಿ ಮೂರ್ತಿಯ ಅಸಲಿ ಮುಖ ಜಗಜ್ಜಾಹೀರಾಗಿದೆ.

ಮೂರ್ತಿ ತೆರವುಗೊಳಿಸುವುದಕ್ಕೂ ಮೊದಲು ಮೂರ್ತಿಯ ಸುತ್ತ ದಪ್ಪದ ಕಪ್ಪು ಪ್ಲಾಸ್ಟಿಕ್ ಹೊದಿಕೆ ಹೊದಿಸಲಾಗಿತ್ತು. ಇದರಿಂದ ಯಾರಿಗೂ ಮೂರ್ತಿಯ ಸತ್ಯಾಸತ್ಯತೆ‌ ಗೊತ್ತಾಗುತ್ತಿರಲಿಲ್ಲ. ಅಲ್ಲದೇ ನಿಷೇಧವಿರುವುದರಿಂದ ಬೆಟ್ಟವನ್ನು ಪ್ರವೇಶಿಸಲು ಯಾರಿಗೂ ಅವಕಾಶವೂ ಇರಲಿಲ್ಲ. ಆದರೆ ಇದೀಗ ಹಿಂದೆ ಪ್ರತಿಷ್ಠಾಪಿಸಿದ್ದ ಪರಶುರಾಮನ ಮೂರ್ತಿಯ ಪಾದ, ಕಾಲು ಬಿಟ್ಟು ಉಳಿದ ಭಾಗ ಮಾಯವಾಗಿರುವುದು ಡ್ರೋಣ್ ಕ್ಯಾಮರಾದಲ್ಲಿ ಸೆರೆಯಾಗಿದೆ.

ಉಮಿಕಲ್ಲು ಬೆಟ್ಟದಲ್ಲಿ ಪ್ರತಿಷ್ಠಾಪಿಸಲಾಗಿದ್ದ 33 ಅಡಿ ಎತ್ತರದ ಪರಶುರಾಮನ ಕಂಚಿನ ಪ್ರತಿಮೆ ಇದೀಗ ಮಾಯವಾಗಿರು‌ವುದು ಡ್ರೋನ್ ಕ್ಯಾಮರ ಮೂಲಕ ಬಹಿರಂಗವಾಗಿದೆ. ಇದರೊಂದಿಗೆ ವಿಗ್ರಹ ಸಂಪೂರ್ಣ ನಕಲಿ ಎಂಬುದು ನೂರಕ್ಕೆ ನೂರರಷ್ಟು ಸತ್ಯ ಎಂಬುವುದು ಜನರಿಗೆ ಮನವರಿಕೆಯಾಗಿದೆ ಎಂದು ಹೋರಾಟಗಾರರು ಹೇಳುತಿದ್ದಾರೆ.

ಪೊಲೀಸರ ಬಿಗಿ ಬಂದೋಬಸ್ತ್ ನಲ್ಲಿ ಪರಶುರಾಮ ಮೂರ್ತಿ ಮಾಯ‌ವಾಗಿದೆ. ಇದನ್ನು ಹುಡುಕಿಕೊಡುವಂತೆ, ಸಮಾನಮನಸ್ಕ ಹೋರಾಟಗಾರರ ತಂಡದ ದಿವ್ಯಾನಾಯಕ್ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Exit mobile version