Home ಕರಾವಳಿ ಕಾರ್ಕಳದ ಅರುಣೋದಯ ವಿಶೇಷ ಶಾಲೆಗೆ ಪ್ರಶಸ್ತಿ

ಕಾರ್ಕಳದ ಅರುಣೋದಯ ವಿಶೇಷ ಶಾಲೆಗೆ ಪ್ರಶಸ್ತಿ

ಉಡುಪಿ: ಮಂಗಳೂರು ವಿಶ್ವವಿದ್ಯಾಲಯ, ಯುವಜನ ಕ್ರೀಡಾ ಇಲಾಖೆ, ಜಿಪಂ ಉಡುಪಿ, ಡಾ. ಜಿ ಶಂಕರ್ ಸರಕಾರಿ ಮಹಿಳಾ ಕಾಲೇಜು, ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಇವರ ಸಹಯೋಗದಲ್ಲಿ ಉಡುಪಿ ಅಜ್ಜರಕಾಡು ಸ್ಟೇಡಿಯಂ ನಲ್ಲಿ ನಡೆದ ಕ್ರೀಡಾ ಕೂಟದಲ್ಲಿ ಕಾರ್ಕಳ ಅರುಣೋದಯ ವಿಶೇಷ ಶಾಲಾ ಮಕ್ಕಳು ಭಾಗವಹಿಸಿ ಐದು ಚಿನ್ನದ ಪದಕ, ನಾಲ್ಕು ಬೆಳ್ಳಿಯ ಪದಕ, ಆರು ಕಂಚಿನ ಪದಕಗಳನ್ನು ಪಡೆದಿರುತ್ತಾರೆ
ಸಮಾರಂಭದಲ್ಲಿ ಶಾಸಕ ಯಶ್ ಪಾಲ್ ಸುವರ್ಣ, ರೆಡ್ ಕ್ರಾಸ್ ಸಂಸ್ಥೆಯ ಅಧ್ಯಕ್ಷ ಬಸ್ರುರು ರಾಜೀವ್ ಶೆಟ್ಟಿ ನಿರ್ದೇಶನಾಲಯದ ಯೋಜನಾ ನಿರ್ದೇಶಕರು ಅಲೀಮಾ,ಗಿರೀಶ್ ಶೆಟ್ಟಿ ತೆಲ್ಲಾರ್ ಉಪಸ್ಥಿತರಿದ್ದರು
ಅರುಣೋದಯ ವಿಶೇಷ ಶಾಲೆಯು ಸಲ್ಲಿಸಿದ ಸೇವೆಯನ್ನು ಗುರುತಿಸಿ ಶಾಲಾ ಆಡಳಿತ ಮಂಡಳಿಯ ಮ್ಯಾನೇಜಿಂಗ್ ಟ್ರಸ್ಟಿಯಾದ ಶ್ಜೆಸಿಂತಾ ಡಿಮೆಲ್ಲೋ ರವರನ್ನು ಸನ್ಮಾನಿಸಲಾಯಿತು. .

Exit mobile version