Home ಕರಾವಳಿ ಪ್ರಗತಿನಗರ: ಜನರ ಕುಂದು ಕೊರತೆ ಆಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಪ್ರಗತಿನಗರ: ಜನರ ಕುಂದು ಕೊರತೆ ಆಲಿಸಿದ ಶಾಸಕ ಗುರ್ಮೆ ಸುರೇಶ್ ಶೆಟ್ಟಿ

ಉಡುಪಿ: ಅಲೆವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಪ್ರಗತಿ ನಗರಕ್ಕೆ ಇಂದು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು ಭೇಟಿ ನೀಡಿ ಜನರ ಕುಂದು ಕೊರತೆಯನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು.

ರಸ್ತೆ ನಿರ್ಮಾಣ ಹಾಗೂ ನಿವೇಶನ, ಹಕ್ಕುಪತ್ರ ಸಮಸ್ಯೆ ಬಗ್ಗೆ ಸ್ಥಳೀಯರು ಶಾಸಕರಿಗೆ ಅಹವಾಲು ನೀಡಿದರು. ಈ ಬಗ್ಗೆ ಸಂಬಂಧಪಟ್ಟ ಇಲಾಖಾಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಯನ್ನು ಪರಿಹರಿಸುವುದಾಗಿ ಶಾಸಕರು ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಕಾಪು ಮಂಡಲ ಬಿಜೆಪಿ ಅಧ್ಯಕ್ಷ ಶ್ರೀಕಾಂತ್ ನಾಯಕ್, ಅಲೆವೂರು ಗ್ರಾಮ ಪಂಚಾಯತ್ ಸದಸ್ಯರಾದ ಶೇಖರ ಆಚಾರ್ಯ, ಅವಿನಾಶ್ ಶೆಟ್ಟಿಗಾರ್, ಆಶೀಶ್, ಅಕ್ಷಯ ಎಂಟರ್ಪ್ರೈಸಸ್ ಅರವಿಂದ ನಾಯಕ್, ಬೂತ್ ಅಧ್ಯಕ್ಷ ಮಂಜು ಉಪಸ್ಥಿತರಿದ್ದರು.

Exit mobile version