Home ಕರಾವಳಿ ಕೆಳಪರ್ಕಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಕೆಳಪರ್ಕಳದಲ್ಲಿ ಬೃಹತ್ ಗಾತ್ರದ ಹೆಬ್ಬಾವು ಸೆರೆ

ಮಣಿಪಾಲ: ಇಲ್ಲಿನ ಕೆಳಪರ್ಕಳದ ಆದರ್ಶ್ ಶೆಟ್ಟಿಗಾರ್ ಎಂಬವರ ಮನೆಯ ಇಂದು ಸಂಜೆ ಏಳು ಗಂಟೆಯ ಸುಮಾರಿಗೆ ಬೃಹತ್ ಗಾತ್ರದ ಹೆಬ್ಬಾವೊಂದು ಕಾಣಿಸಿಕೊಂಡಿದೆ.

ಯಾವುದೇ ಆಹಾರ ನುಂಗಿ ಓಡಾಡಲು ಆಗದ ಸ್ಥಿತಿಯಲ್ಲಿ ಹೆಬ್ಬಾವು ಕಂಡುಬಂದಿದೆ. ಕೂಡಲೇ ಸ್ಥಳೀಯರಾದ ಗಣೇಶ್ ಆಚಾರ್ಯ ಎಂಬವರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಬಂದ ಗಣೇಶ್ ಅವರು ಸ್ಥಳೀಯರ ಸಹಕಾರದೊಂದಿಗೆ ಹೆಬ್ಬಾವನ್ನು ಸುರಕ್ಷಿತವಾಗಿ ಸೆರೆ ಹಿಡಿದು, ಬಳಿಕ ಕಾಡಿಗೆ ಬಿಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಈ ಸಂದರ್ಭದಲ್ಲಿ ಆದರ್ಶ್ ಶೆಟ್ಟಿಗಾರ್, ಬಾಲಕೃಷ್ಣ ಶೆಟ್ಟಿಗಾರ್ ಅವರು ಕಾರ್ಯಾಚರಣೆಗೆ ಸಹಕರಿಸಿದರು. ಹೆಬ್ಬಾವು ಅಂದಾಜು 8 ಫೀಟ್ ಉದ್ದವಿದ್ದು, ಸುಮಾರು 30 ರಿಂದ 35 ಕೆಜಿಯಷ್ಟು ಭಾರವಿತ್ತು ಎನ್ನಲಾಗಿದೆ.

Exit mobile version