Home ಕರಾವಳಿ ಉಡುಪಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ.!

ಉಡುಪಿ ನಗರದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಬೀಳುತ್ತೆ ದಂಡ.!

ಉಡುಪಿ: ನಗರದ ವಿವಿಧೆಡೆ ಸುಗಮ
ಸಂಚಾರ ಕಲ್ಪಿಸುವ ನಿಟ್ಟಿನಲ್ಲಿ ನೋ ಪಾರ್ಕಿಂಗ್ ಮಾಡಲಾಗಿದ್ದು, ಆದರೂ ಎಲ್ಲೆಂದರಲ್ಲಿ ವಾಹನ ನಿಲ್ಲಿಸಿದರೆ ಪೊಲೀಸರು ಲಾಕ್ ಹಾಕಿ ದಂಡ ವಸೂಲು ಮಾಡಲು ಮುಂದಾಗಿದ್ದಾರೆ.
ಈಗಾಗಲೇ ಸರ್ವಿಸ್ ಬಸ್ ತಂಗುದಾಣ, ಸಿಟಿಬಸ್ ತಂಗುದಾಣದ ಬಳಿ ಹಲವಾರು ವಾಹನಗಳಿಗೆ ಸೋಮವಾರ ಲಾಕ್ ಅಳವಡಿಕೆ ಮಾಡಿ ಬಿಸಿ ಮುಟ್ಟಿಸಲಾಗಿದೆ. ನಿಗದಿಪಡಿಸಿದ ಪಾರ್ಕಿಂಗ್‌ನಲ್ಲಿ ಸ್ಥಳಾವಕಾಶ ಇದ್ದರೂ ಎಲ್ಲೆಂದರಲ್ಲಿ ನಿಲ್ಲಿಸುವ ಘಟನೆಗಳು ನಡೆಯುತ್ತಿವೆ. ಅಲ್ಲದೆ ಬೆಳಗ್ಗಿನಿಂದ ಸಂಜೆಯವರೆಗೂ ವಾಹನಗಳನ್ನು ನಿಲ್ಲಿಸಿ ಹೋಗುವುದು ಸುಗಮ ಸಂಚಾರಕ್ಕೆ ಅನುಕೂಲವಾಗುವ ಕಾರಣಕ್ಕೆ ಲಾಕ್ ಅಳವಡಿಕೆ ಮಾಡಲಾಗುತ್ತಿದೆ ಎನ್ನುತ್ತಾರೆ ಸಂಚಾರ ಠಾಣೆಯ ಪೊಲೀಸರು.
ಎಲ್ಲೆಂದರಲ್ಲಿ ನಿಲ್ಲಿಸುವ ಚತುಷ್ಚಕ್ರ ವಾಹನಗಳನ್ನು ಟೋಯಿಂಗ್ ಮಾಡಲೆಂದು ಸಂಚಾರ ಠಾಣೆಯಲ್ಲಿ ಕೆಲ ವರ್ಷದ ಹಿಂದೆ ವಾಹನವಿತ್ತು. ಆದರೆ ಈಗ ಅದು ಸೇವೆಯಲ್ಲಿಲ್ಲ. ಈಗಾಗಲೇ ಜಿಲ್ಲಾ ಪೊಲೀಸ್ ಇಲಾಖೆಯು ಹೊಸ ಟೋಯಿಂಗ್ ವಾಹನಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ

Exit mobile version