Home ಕರಾವಳಿ ಅ. 3ರಂದು ಉಡುಪಿ ಜಿಲ್ಲೆ ಬಂದ್ ಮಾಡಲು ಅವಕಾಶವಿಲ್ಲ: ಎಸ್ಪಿ ಡಾ. ಅರುಣ್

ಅ. 3ರಂದು ಉಡುಪಿ ಜಿಲ್ಲೆ ಬಂದ್ ಮಾಡಲು ಅವಕಾಶವಿಲ್ಲ: ಎಸ್ಪಿ ಡಾ. ಅರುಣ್

ಉಡುಪಿ: ಉಡುಪಿ ಜಿಲ್ಲಾ ಲಾರಿ ಮಾಲೀಕರ ಒಕ್ಕೂಟ ಮತ್ತು ಇತರ ಸಂಘಟನೆಗಳು ಅ.3ರಂದು ಉಡುಪಿ ಜಿಲ್ಲಾ ಬಂದ್ ಗೆ ಕರೆ ನೀಡಿದ್ದು, ಇದು ಕಾನೂನು ಬಾಹಿರ ಹಾಗೂ ಸಂವಿಧಾನ ವಿರೋಧಿಯಾಗಿದೆ. ಜನ ಸಾಮಾನ್ಯರ ಮೂಲಭೂತ ಹಕ್ಕಿಗೆ ಚ್ಯುತಿಯಾಗುವುದರಿಂದ ಯಾವುದೇ ರೀತಿಯ ಬಂದ್‌ ಮಾಡಲು ಅವಕಾಶ ಇರುವುದಿಲ್ಲ ಎಂದು ಉಡುಪಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಕೆ. ತಿಳಿಸಿದ್ದಾರೆ.

ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಅವರು, ಯಾವುದೇ ಪ್ರತಿಭಟನೆ ಮಾಡಲು ಕೂಡ ಅವಕಾಶವಿರುವುದಿಲ್ಲ. ಉಡುಪಿ ಜಿಲ್ಲೆಯಲ್ಲಿ ಯಾವುದೇ ರೀತಿಯ ಮೆರವಣಿಗೆಯನ್ನು ಹಮ್ಮಿಕೊಳ್ಳಲು ಅವಕಾಶ ನೀಡಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

Exit mobile version