Home ಕರಾವಳಿ ಮೇ. 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

ಮೇ. 15ರಿಂದ 17ರವರೆಗೆ ಸುಕ್ಷೇತ್ರ ಗುರುಪುರ ಶ್ರೀಗುರುಮಹಾಕಾಲೇಶ್ವರ ದೇವರ ಏಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವ

ಉಡುಪಿ: ಸುಕ್ಷೇತ್ರ ಗುರುಪುರ ಪಲ್ಗುಣಿ ನದಿ ತಟದ ಗೋಳಿದಡಿಗುತ್ತುನಲ್ಲಿ ನಿರ್ಮಾಣಗೊಂಡಿರುವ ದಕ್ಷಿಣ ಭಾರತದಲ್ಲಿಯೇ ಪ್ರಪ್ರಥಮವಾಗಿ ಮೇ. 15ರಿಂದ 17 ರವರೆಗೆ ನಡೆಯಲಿರುವ ಶ್ರೀಗುರುಮಹಾಕಾಲೇಶ್ವರ ದೇವರ ಬ್ರಹತ್ ಎಕಶಿಲಾ ಮೂರ್ತಿಯ ಪ್ರತಿಷ್ಠಾ ಬ್ರಹ್ಮಕಲಶ ಮಹೋತ್ಸವದ ಆಮಂತ್ರಣ ಪತ್ರಿಕೆ ಮತ್ತು ಪಂಚಕಲ್ಯಾಣಯುಕ್ತ ಕಲಶ ರಶೀದಿ ಬಿಡುಗಡೆ ಸಮಾರಂಭವು ಗುರುಪುರ ಗೋಳಿದಡಿಗುತ್ತು ಸುಕ್ಷೇತ್ರ ಗುರುಪುರದಲ್ಲಿ ಇಂದು ನಡೆಯಿತು.

ಬ್ರಹ್ಮಕಲಶ ಸಂಭ್ರಮ ಸಮಿತಿ ಅಧ್ಯಕ್ಷ, ಮಾಜಿ ಸಂಸದ ಕುಂಜಾಡಿ ಬೀಡು ನಳಿನ್ ಕುಮಾರ್ ಕಟೀಲು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು. ಗೋಳಿದಡಿ ಗುತ್ತು ಗುರುಪುರ ಸುಕ್ಷೇತ್ರಾಧ್ಯಕ್ಷ , ಗಡಿಕಾರರಾದ ವರ್ಧಮಾನ ಗುರುಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು.
ಗುರುಪುರ ಪ್ರಖಂಡ ಸಮಿತಿ ಅಧ್ಯಕ್ಷ ಚಂದ್ರಹಾಸ ಟಿ ಅಮೀನ್, ಹೋಟೆಲ್ ವುಡ್ ಲ್ಯಾಂಡ್ ಮಾಲಕ ವೈ ರವಿ ಭಟ್, ವಿಧಾನ ಪರಿಷತ್ ಸದಸ್ಯ ಹರಿಕೃಷ್ಣ ಬಂಟ್ವಾಳ, ಬ್ರಹ್ಮಕಲಶ ಸಂಭ್ರಮ ಸಮಿತಿ ಗೌರವ ಸಲಹೆಗಾರ ಓ ತಿರುಮಲೇಶ ಭಟ್ ಸಾಂದರ್ಭಿಕವಾಗಿ ಮಾತನಾಡಿದರು
.

ಅಂತರಾಷ್ಟ್ರೀಯ ಕ್ರೀಡಾಪಟು, ಚಲನಚಿತ್ರ ನಟ, ಬ್ರಹ್ಮಕಲಶ ಸಂಭ್ರಮದ ಸ್ವಾಗತ ಸಮಿತಿ ಅಧ್ಯಕ್ಷ ಮಜಲಬೆಟ್ಟು ಬೀಡು ರೋಹಿತ್ ಕುಮಾರ್ ಕಟೀಲು, ಪ್ರಧಾನ ಕಾರ್ಯದರ್ಶಿ ಚೇಳ್ಯಾರುಗುತ್ತು ದಿವಾಕರ ಸಮಾನಿ ಹಿರಿಯ ನ್ಯಾಯವಾದಿ ಶಂಭು ಶರ್ಮ, ಎಣ್ಮಕಜೆ ಸುಧೀರ್ ಕುಮಾರ್ ಶೆಟ್ಟಿ, ಗುರುಪುರ ಶ್ರೀ ಗುರುಮಹಾಕಾಲೇಶ್ವರ ರಿಲೀಜಿಯಸ್ ಮತ್ತು ಚಾರೀಟೇಬಲ್ ಟ್ರಸ್ಟ್(ರಿ) ಕಾರ್ಯದರ್ಶಿ ಉಷಾ ಪ್ರಸಾದ್ ಶೆಟ್ಟಿ ಉಪಸ್ಥಿತರಿದ್ದರು. ನವೀನ್ ಕುಮಾರ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.

Exit mobile version