Home ಕರಾವಳಿ ಕುಂತಲನಗರ: ಶಾಲಾ ಬಸ್ ಗೆ ಕಾರು ಡಿಕ್ಕಿ; ತಂದೆ-ಮಗನಿಗೆ ಗಂಭೀರ ಗಾಯ

ಕುಂತಲನಗರ: ಶಾಲಾ ಬಸ್ ಗೆ ಕಾರು ಡಿಕ್ಕಿ; ತಂದೆ-ಮಗನಿಗೆ ಗಂಭೀರ ಗಾಯ

ಉಡುಪಿ: ಶಾಲಾ ಬಸ್ ಗೆ ಹಿಂಬದಿಯಿಂದ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಇಂದು ಬೆಳಿಗ್ಗೆ ಮಣಿಪುರ ಗ್ರಾಮದ ಕುಂತಲನಗರ ಸಮೀಪ ಸಂಭವಿಸಿದೆ.

ಶಾಲಾ ಬಸ್ ಮಣಿಪುರ ಕಡೆಗೆ ತೆರಳುತ್ತಿದ್ದು, ಈ ವೇಳೆ ಹಿಂಬದಿಯಿಂದ ಬಂದ ಇಕೋ ಕಾರು ಡಿಕ್ಕಿ ಹೊಡೆದಿದೆ. ಇದರಿಂದ ಕಾರಿನಲ್ಲಿದ್ದ ತಂದೆ ಹಾಗೂ ಮಗನಿಗೆ ಗಂಭೀರ ಗಾಯವಾಗಿದ್ದು, ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಡಿಕ್ಕಿ ಹೊಡೆದ ರಭಸಕ್ಕೆ ಕಾರಿನ ಮುಂಭಾಗ ಸಂಪೂರ್ಣ ಜಖಂಗೊಂಡಿದೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

Exit mobile version